

ಪ್ರಕಾಶ ಅಸುಂಡಿ ಕಟಕೋಳ: ಉತ್ತರ ಕರ್ನಾಟಕದ ಜಾಗತ ದೆವ ಗೊಡಚಿ ವೀರಭದ್ರ ದೇವರ ಪರಮಭಕ್ತರಾಗಿದ್ದ ಕಿಲ್ಲಾ ತೊರಗಲ್ಲ ಮಹಾರಾಜ ನರಸೋಜಿರಾವ ಮುರಾರಿರಾವ ಶಿಂಧೆ ಕಲಿಯುಗ ಕರ್ಣನೆಂದೇ ಪ್ರಸಿದ್ಧರಾಗಿದ್ದಾರೆ.
ನರಸೋಜಿರಾವ್ ರಾಮದುರ್ಗ ತಾಲೂಕಿನ ತೊರಗಲ್ ಗ್ರಾಮದ ಏಳು ಸುತ್ತಿನ ಕೋಟೆಯಲ್ಲಿ 1910ರ ಜುಲೆ 7ರಂದು ಜನಿಸಿದರು. ಬಾಲ್ಯದಲ್ಲೇ ತಂದೆ&ತಾಯಿಯ ಕಳೆದುಕೊಂಡರು. ಕೊಲ್ಲಾಪುರದ ಶಾಹು ಮಾಹಾರಾಜರು ನೇಮಿಸಿದ ಎಂ.ಇ. ಪ್ಯಾಟರಸನ್ ದಾದಿಯ ಆರೈಕೆಯಲ್ಲಿ ನರಸೋಜಿರಾವ ಬೆಳೆದರು. 6ನೇ ವಯಸ್ಸಿನಲ್ಲಿಯೇ ಕೆನಡಾ ದೇಶಕ್ಕೆ ಕಳಿಸಿದರು.
18ನೇ ವಯಸ್ಸಿನಲ್ಲಿ ಸ್ವದೇಶಕ್ಕೆ ಆಗಮಿಸಿ ಮಹಾರಾಷ್ಟ್ರದ ಕೊಲ್ಲಾಪುರ, ಪಾಂಚಗಣಿ ಮತ್ತು ಬೆಂಗಳೂರು ನಗರದಲ್ಲಿ ಉನ್ನತ ಶಿಣ ಪಡೆದರು. ನಂತರ 1931ರಲ್ಲಿ ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರ ಸಹೋದರನ ಪುತ್ರಿ ಸುವರ್ಣದೇವಿ ಜತೆ ವಿವಾಹವಾದರು. 1932ರ ಜೂನ್ 3ರಂದು ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ ಸಂಸ್ಥಾನದ ರಾಜರಾಗಿ ನರಸೋಜಿರಾವ ಶಿಂಧೆ ಪಟ್ಟಾಭಿಷೇಕ ಸ್ವೀಕರಿಸಿದರು. ಪ್ರಜೆಗಳ ೇಮಾಭಿವದ್ಧಿಗಾಗಿ ಕೆಲ ಆಡಳಿತಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಕೆನಡಾ, ಜಪಾನ್, ಶ್ರೀಲಂಕಾ, ಚೀನಾ ಇತರ ರಾಷ್ಟ್ರಗಳಿಗೆ ಭೇಟಿ ನೀಡಿ ಅಲ್ಲಿನ ಆಡಳಿತ ವೆಖರಿ, ಕಾನೂನುಗಳು ಮತ್ತು ಪ್ರಜೆಗಳಿಗೆ ನೀಡುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದು ಸಂಸ್ಥಾನದಲ್ಲಿ ಜಾರಿಗೆ ತರಲು ಪ್ರಯತ್ನಿಸಿದರು.
ನರಸೋಜಿರಾವ್ ಅವರು ಆಡಳಿತ ಸುಧಾರಣೆಗೆ ತೊರಗಲ್ ಸಂಸ್ಥಾನದಲ್ಲಿದ್ದ 36 ಹಳ್ಳಿಗಳಿಗೆ ಒಂಬತ್ತು ಇನಾಮದಾರರನ್ನು ನೇಮಕಗೊಳಿಸಿದರು. ಎಲ್ಲ ಹಳ್ಳಿಗಳ ಪ್ರಜೆಗಳ ಕಷ್ಟ&ನಷ್ಟಗಳನ್ನು ಆಲಿಸಿದರು. ಬ್ರಿಟಿಷರು ರೂಪಿಸುತ್ತಿದ್ದ ಹೊಸ ಹೊಸ ಕಾಯ್ದೆಗಳ ಪರಿಣಾಮ ಜನರ ಮೇಲೆ ನೇರವಾಗಿ ತೆರಿಗೆ ಭಾರ ಬೀಳದಂತೆ ರಾಜ್ಯಭಾರ ನಡೆಸಿದರು. 1952ರಲ್ಲಿ ಗೊಡಚಿ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ನಿರ್ಮಿಸಿ, ಎಲ್ಲ ಕಾರ್ಯಕ್ರಮಗಳು ಸರಾಗವಾಗಿ ನಡೆಯಲು ದೇವಸ್ಥಾನಕ್ಕೆ ನೂರಾರು ಎಕರೆ ಜಮೀನು ದಾನವಾಗಿ ನೀಡಿದರು. 1937ರಲ್ಲಿ ನಿರ್ಮಾಣವಾದ ಚಂದರಗಿಯಲ್ಲಿದ್ದ ತಮ್ಮ ಬೇಸಿಗೆ ಅರಮನೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕ್ರೀಡಾಶಾಲೆ ಸ್ಥಾಪಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು. ಸಾವಿರಾರು ಎಕರೆ ಕಷಿಭೂಮಿ ರೆತರಿಗೆ ದಾನ ಮಾಡಿದರು. ಸ್ವಾತಂತ್ರ್ಯ ನಂತರ ತೊರಗಲ್ ಸಂಸ್ಥಾನವು ಭಾರತದೊಂದಿಗೆ ವಿಲೀನಗೊಂಡಿತು. ವಿಲೀನದ ಬಳಿಕ ತಮ್ಮ ಪಾಲಿಗೆ ಬಂದ ಆಸ್ತಿಯಲ್ಲೇ ಕುಟುಂಬದ ಸದಸ್ಯರೊಟ್ಟಿಗೆ ಸೇರಿ ಕೃಷಿ ಮಾಡುತ್ತ ಸರಳ ಜೀವನ ನಡೆಸಿದರು. ರಾಮದುರ್ಗ ತಾಲ್ಲೂಕಿಗೆ ಕಬ್ಬಿನ ಬೆಳೆ ಪರಿಚಯಸಿದ ಕೀರ್ತಿ ನರಸೋಜಿರಾವ ಮಹಾರಾಜರಿಗೆ ಸಲ್ಲುತ್ತದೆ.
ಸರಳ ಜೀವನ, ಉತ್ಕೃಷ್ಟ ವಿಚಾರಧಾರೆ ಮತ್ತು ಸಾಧಾರಣ ಜೀವನಶೆಲಿಯ ಮೂಲಕ ತೊರಗಲ್, ಗೊಡಚಿ, ಚಂದರಗಿ ಹಾಗೂ ಅಕ್ಕಪಕ್ಕದ 36 ಗ್ರಾಮಗಳ ಜನರ ಪಾಲಿಗೆ ಪ್ರತ್ಯ ದೆವದಂತಿದ್ದ ನರಸೋಜಿರಾವ್ ಅವರ ಸಾಧನೆ ಮತ್ತು ದಾನ ಪ್ರವೃತ್ತಿಯನ್ನು ಈ ಭಾಗದ ಜನರು ಇಂದಿಗೂ ನೆನೆಯುತ್ತಾರೆ. ಅವರ ಕುಟುಂಬದ ಸದಸ್ಯರಿಗೆ ಜನರು ಬಹಳ ಗೌರವ ನೀಡುತ್ತಾರೆ. ಗೊಡಚಿ ವೀರಭದ್ರ ದೇವಸ್ಥಾನದ ಸಕಲ ಕಾರ್ಯಗಳು ಶಿಂಧೆ ವಂಶಸ್ಥರ ಮುಂದಾಳತ್ವದಲಿ ಸುಗಮವಾಗಿ ನಡೆಯುತ್ತವೆ. ಇಲ್ಲಿನ ಜನತೆಯಲ್ಲಿ ಶಿಂಧೆ ಕುಟುಂಬದ ಕುಟುಂಬಸ್ಥರ ಆದರ್ಶ ಜೀವನ ಜನಮಾನಸದಲ್ಲಿ ಉಳಿದಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಜು. 7ರಂದು ಗೊಡಚಿಯಲ್ಲಿ ನರಸೋಜಿರಾವ 115ನೇ ಜಯಂತ್ಯುತ್ಸವ ಜರುಗಲಿದ್ದು, ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.