ಶಾಂತಿ, ನೆಮ್ಮದಿಯ ತಾಣ ನರಸಿಂಹರಾಜಪುರ

15nrp 2..
Published on

ಎನ್.ಆರ್.ಪುರ: ನರಸಿಂಹರಾಜಪುರ ಎಂಬುವುದು ಕೇವಲ ಊರಿನ ಹೆಸರಲ್ಲ, ಅದು ಶಾಂತಿ, ನೆಮ್ಮದಿ, ಸೌಹಾರ್ದತೆಯ ಪ್ರತೀಕ ಎಂದು ವಿದ್ವಾನ್ ವಿ.ಎಸ್.ಕೃಷ್ಣಭಟ್ ಹೇಳಿದರು.

ಪಟ್ಟಣದ ಅಗ್ರಹಾರ ಶ್ರೀಉಮಾಮಹೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ನಡೆದ ನರಸಿಂಹರಾಜಪುರದ ನೆನಪುಗಳ ಮೆರವಣಿಗೆ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ನಾವು ನಡೆದು ಬಂದ ಜೀವನದ ಹಾದಿಯ ಸಿಂಹಾವಲೋಕನ ಮಾಡಿಕೊಳ್ಳಬೇಕು. ನಮ್ಮ ನೆನಪುಗಳನ್ನು ದಾಖಲೆಗಳಾಗಿ ಮಾಡುವುದು ಒಂದು ವಿಶಿಷ್ಟ ಕಲೆಯಾಗಿದೆ. ನಮ್ಮ ಈ ಅಗ್ರಹಾರ ಸಾಮಾಜಿಕ, ಧಾರ್ಮಿಕ, ಸುಸಂಸ್ಕೃತ ಸ್ಥಳವಾಗಿದೆ. ಜೀವನದಲ್ಲಿ ಬದಲಾವಣೆಗಳು ಸಹಜ. ಆದರೆ ನಮ್ಮ ಸಂಸ್ಕೃತಿ, ಸಂಸ್ಕಾರಗಳು ಮಾತ್ರ ಬದಲಾಗಬಾರದು. ಮುಂದಿನ ನಮ್ಮ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಕೊಡುಗೆಯಾಗಿ ನೀಡಬೇಕು ಎಂದರು.

ಕೃತಿಯ ಸಹ ಸಂಪಾದಕ ಎಸ್.ಎನ್.ಕುಮಾರಸ್ವಾಮಿ ಮಾತನಾಡಿ, ನಮ್ಮೂರಿನ ಬಗ್ಗೆ ಕೃತಿಯ ಮೂಲಕ ವರ್ಣನೆ ಮಾಡಲಾಗಿದೆ. ಬರಹವನ್ನು ಸಮಾಜ ಬೇಗ ಗುರುತಿಸುತ್ತದೆ. ಈ ಕೃತಿಯಲ್ಲಿ ನಮ್ಮೂರಿನ ಸಾಧಕರ, ಹಿರಿಯರ, ದೇಗುಲಗಳ ಪರಿಚಯ ಮಾಡಿಕೊಡಲಾಗಿದೆ ಎಂದರು.

ತಾಲೂಕು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಕೊನೋಡಿ ಗಣೇಶ್, ಕೃಷ್ಣಭಟ್, ಲೀಲಾವತಿ, ಶಂಕರ ಅಜ್ಜಂಪುರ ಅವರನ್ನು ಸನ್ಮಾನಿಸಲಾಯಿತು. ಹಾಸನವಾಣಿ ದಿಪತ್ರಿಕೆ ಸಂಪಾದಕಿ ಲೀಲಾವತಿ, ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಹೆಚ್.ಎನ್.ಶಿವಶಂಕರ್, ಲೇಖಕಿ ಭಾಗ್ಯ ನಂಜುಂಡಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net