ರಾಷ್ಟ್ರೀಯ ಪ್ರಶಸ್ತಿಗೆ ನರಸಿಂಹಪ್ಪ, ಅಮರೇಶ ಗಿಣಿವಾರ ಆಯ್ಕೆ

snd award
ನರಸಿಂಹಪ್ಪ, ಅಮರೇಶ ಗಿಣಿವಾರ
Published on

ಸಿಂಧನೂರು: ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಅಂಗವಾಗಿ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಕವಿ ನರಸಿಂಹಪ್ಪ ರಾಮತ್ನಾಳ ಹಾಗೂ ಕತೆಗಾರ ಅಮರೇಶ ಗಿಣಿವಾರ ಆಯ್ಕೆಯಾಗಿದ್ದಾರೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ ತಿಳಿಸಿದ್ದಾರೆ.

ಜೂ. 28 ಮತ್ತು 29 ರಂದು ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ನಡೆಯಲಿರುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಕವಿ ನರಸಿಂಹಪ್ಪ ರಾಮತ್ನಾಳಗೆ ದಲಿತ ಸಾಹಿತ್ಯ ಸಿರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಕತೆಗಾರ ಅಮರೇಶ ಗಿಣಿವಾರ ಅವರ ‘ಪೋಸ್ಟ್ ಆಫೀಸ್‌ನಲ್ಲಿ ಅಕ್ಕನ ಜಡ್ಜಮೆಂಟ್’ ಕಥಾ ಸಂಕಲನಕ್ಕೆ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ರಾಷ್ಟ್ರೀಯ ಗೌರವ, ಯುವ, ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಗವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net