ನಕಾರಾತ್ಮಕ ಶಕ್ತಿ ನಿವಾರಕ ನರಸಿಂಹ

FotoJet (2)
Published on

ಶಾಸಕ ಎಚ್.ಸಿ.ಬಾಲಕೃಷ್ಣ ಅಭಿಮತ | ಮಾಗಡಿಯಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿ ಜಯಂತಿ ಆಚರಣೆ

 ಮಾಗಡಿ : ಜೀವನದಲ್ಲಿ ಎಲ್ಲ ನಕಾರಾತ್ಮಕ ಶಕ್ತಿಗಳು, ದುಃಖ ಗಳನ್ನು ತೊಡೆದು ಹಾಕಲು ನರಸಿಂಹ ಪ್ರಸಿದ್ಧಿ ಹೊಂದಿದ್ದಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದ ಕೆಂಪೇಗೌಡ ನಗರದ ಗದ್ದೆ ಬಯಲಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಜಯಂತಿ ಹಾಗೂ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ,

ಈ ದಿನವು ದುಷ್ಟರ ಮೇಲಿನ ವಿಜಯವನ್ನು ಪ್ರತಿನಿಧಿಸುತ್ತದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಕೆ.ಎನ್.ನರಸೇಗೌಡ ಮಾತನಾಡಿ, ಸನಾತನ ಹಿಂದು ಸಂಸ್ಕೃತಿಯಲ್ಲಿ ಲಕ್ಷ್ಮೀ ನರಸಿಂಹ ಜಯಂತಿ ಬಹಳ ವೈಶಿಷ್ಟ್ಯತೆ ಪಡೆದಿದೆ. ಹಿಂದು ಧರ್ಮದಲ್ಲಿ ನರಸಿಂಹ ಜಯಂತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ ಎಂದರು.

ಪುರಸಭಾ ಸದಸ್ಯೆ ಮಮತಾ ಗುರುಸ್ವಾಮಿ ಮಾತನಾಡಿ, ಪಟ್ಟಣದ ಕೆಂಪೇಗೌಡ ನಗರದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ನಿರ್ಮಿಸುವ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕತೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ನರಸಿಂಹ ಜಯಂತಿ ಹಿನ್ನೆಲೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಅಷ್ಟಾವಧಾನ ಸೇವೆ, ಮಂತ್ರ ಪುಷ್ಪಾರ್ಚನೆ, ಸಹಸ್ತ್ರ ನಾಮಾರ್ಚನೆ, ಕುಂಕುಮಾರ್ಚನೆ ನೆರವೇರಿಸಲಾಯಿತು.

ಸಂಜೆ ಹೂವಿನ ಪಲ್ಲಕ್ಕಿಯಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿ ಉತ್ಸವಮೂರ್ತಿ ಮೆರವಣಿಗೆ ಮಂಗಳವಾದ್ಯ, ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಡೆಸಲಾಯಿತು.

ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಎಚ್.ಎನ್. ಅಶೋಕ್, ಬಮುಲ್ ನಿರ್ದೇಶಕ ನರಸಿಂಹಮೂರ್ತಿ, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಬಿಜೆಪಿ ಮುಖಂಡ ಜಗನ್ನಾಥ್‌ಗೌಡ, ಜೆಡಿಎಸ್ ಮುಖಂಡ ತಮ್ಮಣ್ಣಗೌಡ, ಲಕ್ಷ್ಮೀ ನರಸಿಂಹಸ್ವಾಮಿ ಸೇವಾ ಟ್ರಸ್ಟ್ ಉಪಾಧ್ಯಕ್ಷ ರಘುವೀರ್, ಕಾರ್ಯಾಧ್ಯಕ್ಷ ಜಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಕೆ.ಆರ್. ರಾಮಕೃಷ್ಣ, ಖಜಾಂಚಿ ಎಂ.ಆರ್. ಶ್ರೀನಿವಾಸ್, ವಕೀಲ ನಾರಾಯಣಸ್ವಾಮಿ, ಎಂ.ಎನ್. ಕುಮಾರಸ್ವಾಮಿ, ನಿವೃತ್ತ ಪಿಡಿಒ ಲಕ್ಷ್ಮೀನಾರಾಯಣ್, ಸಿದ್ದಲಿಂಗಮೂರ್ತಿ, ಎಪಿಎಂಸಿ ಮಾಜಿ ನಿರ್ದೇಶಕ ಜಯಕುಮಾರ್, ವಿಶ್ವಕರ್ಮ ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net