ನರಸಿಂಹ ಜಯಂತಿ ಆಚರಣೆ

Narasimha Jayanti celebration
ವಿಜಯಪುರದ ಗಾಯಿ ಚಾಳ್ ಹಳಕೇರಿ ಗಲ್ಲಿಯಲ್ಲಿರುವ ಪ್ರಸನ್ನೇಶ್ವರ ದೇವಸ್ಥಾನದಲ್ಲಿ ನರಸಿಂಹ ಜಯಂತಿ ಅಂಗವಾಗಿ ಪಂ. ಜಯತೀರ್ಥ ಪಂಢರಿ ಪ್ರವಚನ ನೀಡಿದರು.
Published on

ವಿಜಯಪುರ : ನಗರದ ಗಾಯಿ ಚಾಳ್ ಹಳಕೇರಿ ಗಲ್ಲಿಯಲ್ಲಿರುವ ಪುರಾತನ ಪ್ರಸನ್ನೇಶ್ವರ, ಪ್ರಸನ್ನಾಂಜನೇಯ ಹಾಗೂ ನವೀಕೃತ ನೀಲಕಂಠೇಶ್ವರ ದೇವಾಲಯದಲ್ಲಿ ಶನಿವಾರ ನರಸಿಂಹ ಜಯಂತಿಯನ್ನು ಅತ್ಯಂತ ಭಕ್ತಿ ಸಡಗರಗಳಿಂದ ಆಚರಿಸಲಾಯಿತು.

ಜಯಂತಿ ಅಂಗವಾಗಿ ಬೆಳಗ್ಗೆ ಸುಪ್ರಭಾತ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಹಾಗೂ ಸತ್ಯನಾರಾಯಣ ಪೂಜೆ ಜರುಗಿತು. ಮಹಿಳಾ ಭಕ್ತರು ಬಾಲ ನರಸಿಂಹನನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಿದರು. ನಂತರ ಭಜನೆಯು ನಡೆಯಿತು.

ಪಂ. ಜಯತೀರ್ಥ ಪಂಢರಿ ಉಪನ್ಯಾಸದಲ್ಲಿ, ಬಾಲಕ ಪ್ರಲ್ಹಾದ ಉತ್ತಮ ಸಂಸ್ಕೃತಿ ಸಂಸ್ಕಾರಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಿದ್ದನ್ನು ವಿವರಿಸುವ ಜತೆಗೆ ನರಸಿಂಹ ದೇವರಲ್ಲಿ ನಮ್ಮೆಲ್ಲ ತೊಂದರೆಗಳನ್ನು ನಿವೇದಿಸಿಕೊಂಡರೆ ಅವುಗಳೆಲ್ಲ ತನ್ನಿಂದ ತಾನೇ ಪರಿಹಾರ ಸಿಗಲಿವೆ ಎಂದರು.

ನಂತರ ಮಂತ್ರಪುಷ್ಪ, ಮಹಾ ನೈವೇದ್ಯ, ಮಹಾ ಮಂಗಳಾರತಿ ಹಾಗೂ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ಹುಬ್ಬಳ್ಳಿಯ ಸುಧೀಂದ್ರಾಚಾರ್ಯ ಉಮರ್ಜಿ ಜಯಂತಿ ಉತ್ಸವದ ಸೇವೆ ನೆರವೇರಿಸಿದರು. ದೇವಾಲಯದ ಅರ್ಚಕ ಪ್ರಕಾಶಾಚಾರ್ಯ ಮದಭಾವಿ, ಸಮಿತಿ ಪದಾಧಿಕಾರಿ ನಾಗೇಶ ಕುಲಕರ್ಣಿ, ಸುರೇಶ ಜೋಶಿ (ನಿಡೋಣಿ), ಜಗನ್ನಾಥ ಕುಲಕರ್ಣಿ, ಅಪ್ಪಣ್ಣ ಗಾಯಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net