ಸಮ್ಮೇಳನಾಧ್ಯಕ್ಷರಾಗಿ ಪಕ್ಷಿತಜ್ಞ ಡಾ.ಎಸ್.ವಿ.ನರಸಿಂಹನ್ ಆಯ್ಕೆ

5adarshkdga1
Published on

ವಿರಾಜಪೇಟೆ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜ೨೧ ರಂದು ನಡೆಯಲಿರುವ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಕೊಡಗಿನ ಪಕ್ಷಿತಜ್ಞ, ಪರಿಸರ ಬರಹಗಾರ ಡಾ.ಎಸ್.ವಿ.ನರಸಿಂಹನ್ ಆಯ್ಕೆಯಾಗಿದ್ದಾರೆ.


ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿರಾಜಪೇಟೆಯ ಪುರಭವನದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಭೆಯ ಸರ್ವಾನುಮತದ ಒಪ್ಪಿಗೆಯ ಮೂಲಕ ಸಮ್ಮೇಳನ ಅಧ್ಯಕ್ಷರ ಆಯ್ಕೆ ಮಾಡಲಾಯಿತು. ವಿರಾಜಪೇಟೆ ತಾಲೂಕಿನ ಆರ್ಜಿ ಮತ್ತು ಬೇಟೋಳಿ ಗ್ರಾಮದಲ್ಲಿ ತಾಲೂಕು ಸಮ್ಮೇಳನ ನಡೆಯಲಿದ್ದು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಡಾ.ಎಸ್.ವಿ.ನರಸಿಂಹನ್ ವಹಿಸಲಿದ್ದಾರೆ.


ಸಭೆಯ ನಂತರ ವಿರಾಜಪೇಟೆಯ ದೇವಾಂಗ ಬೀದಿಯಲ್ಲಿರುವ ಅವರ ಸ್ವಗೃಹಕ್ಕೆ ತೆರಳಿ ವಿರಾಜಪೇಟೆ ಕ.ಸಾ.ಪ ವತಿಯಿಂದ ಡಾ.ನರಸಿಂಹನ್‌ರವರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.


ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೇಶವ ಕಾಮತ್, ತಾಲೂಕು ಕ.ಸಾ.ಪ ಅಧ್ಯಕ್ಷ ರಾಜೇಶ ಪದ್ಮನಾಭ, ಕ.ಸಾ.ಪದ ಪ್ರಧಾನ ಕಾರ್ಯದರ್ಶಿ ಟೋಮಿ ಥಾಮಸ್, ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಹೆಚ್.ಜಿ, ಕೋಶಾಧಿಕಾರಿ ಶಬರೀಶ್ ಶೆಟ್ಟಿ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಗೋಪಾಲಕೃಷ್ಣಗೌಡ, ಪಿ.ಎ.ಮಂಜುನಾಥ್, ಮಾಜಿ ಜಿ.ಪಂ ಸದಸ್ಯ ಶಶಿ ಸುಬ್ರಮಣಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net