ನರಕ ಚತುದರ್ಶಿ ಹಬ್ಬ ಆಚರಣೆ

10 Dwd 8
Published on

ಧಾರವಾಡ: ಇಲ್ಲಿನ ಕೆಲಗೇರಿಯ ಜೆಎಸ್‌ಎಸ್ ಪಬ್ಲಿಕ್ ಶಾಲೆಯಲ್ಲಿ ನರಕ ಚತುದರ್ಶಿ ಹಬ್ಬ ಮತ್ತು ಮಕ್ಕಳ ದಿನವನ್ನು ಶುಕ್ರವಾರ ಆಚರಿಸಲಾಯಿತು.
ವಿದ್ಯಾರ್ಥಿಗಳು ನರಕಾಸುರ, ಕೃಷ್ಣ, ಸತ್ಯಭಾಮೆ ಸೇರಿವ ವಿವಿಧ ದೇವತೆಗಳ ವೇಷಭೂಷಣದಲ್ಲಿ ಗಮನ ಸೆಳೆದರು. ನರಕ ಚತುದರ್ಶಿ ಹಬ್ಬದ ಮಹತ್ವದ ಕುರಿತು ವಿದ್ಯಾರ್ಥಿನಿ ಸಮೃದ್ಧಿ ಛಬ್ಬಿ ಮತ್ತು ಮಕ್ಕಳ ದಿನಾಚರಣೆ ಕುರಿತು ವೈದೇಹಿ ಕುಲಕರ್ಣಿ ಮಾತನಾಡಿದರು. ಸನತ್ ಆರ್. ಸ್ವಾಗತಿಸಿದರು. ಸಿಂಚನಾ ಪಾಟೀಲ ಮತ್ತು ವಿನೀತ ಮಿರ್ಜಿ ನಿರ್ವಹಿಸಿದರು.
ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net