ಅತಿಥಿ ಶಿಕ್ಷಕರ ನೇಮಕಕ್ಕೆ ತರಗತಿ ಬಹಿಷ್ಕರಿಸಿ ಪ್ರತಿಭಟನೆ

23 NRD-3A
Published on

ನರಗುಂದ: ಪಟ್ಟಣದ ಶ್ರೀ ಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅತಿಥಿ ಉಪನ್ಯಾಸಕರ ನೇಮಿಸಿಕೊಳ್ಳುವುದರ ಜತೆಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಎಬಿವಿಪಿ ವತಿಯಿಂದ ತರಗತಿ ಬಹಿಷ್ಕರಿಸಿ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್​ ಶ್ರೀಶೈಲ ತಳವಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಪದವಿ ಕಾಲೇಜ್​ನಲ್ಲಿ ಅತಿಥಿ ಉಪನ್ಯಾಸಕರಿಲ್ಲದೆ ಎರಡು ತಿಂಗಳಿನಿಂದ ವಿದ್ಯಾಥಿರ್ಗಳ ಶೈಕ್ಷಣಿಕ ಭವಿಷ್ಯ ಡೋಲಾಯಮಾನವಾಗಿದೆ. ಸರಿಯಾಗಿ ಪಾಠಗಳಿಲ್ಲದೆ ವಿದ್ಯಾಥಿರ್ಗಳು ಮನೆಗೆ ಮರಳುತ್ತಿದ್ದಾರೆ. ರಾಜ್ಯ ಸರ್ಕಾರ ಅತೀ ಶ್ರೀವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿ ವಿದ್ಯಾಥಿರ್ಗಳ ಶೈಕ್ಷಣಿಕ ಭವಿಷ್ಯಕ್ಕೆ ಬೆಳಕಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ನಗರ ಕಾರ್ಯದಶಿರ್ ಅಭಿಷೇಕ ನವಲಗುಂದ, ತಾಲೂಕು ಸಂಚಾಲಕ ಆಕಾಶ ಕಲಾಲ, ಕಾರ್ಯಕರ್ತರಾದ ರುದ್ರೇಶ ಕೊಣ್ಣೂರ, ಆದಿತ್ಯ ಉಳ್ಳಾಗಡ್ಡಿ, ರಾಜೇಶ ಜಾಧವ, ಮಲ್ಲನಗೌಡ ಹಿರೇಗೌಡ್ರ, ರೋಹಿತ್​ ನೀಲರಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net