ಸಂವಿಧಾನ ನೀಡಿದ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸೋಣ

Narugunda photo 3
Published on

ನರಗುಂದ : ತಾಲೂಕಿನ ವಾಸನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಸಮುದಾಯ ಕಾಮಗಾರಿಯಾದ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕಡ್ಡಾಯ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವಾಸನ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಪ್ಪ ವಾಲಿ ಮಾತನಾಡಿ, ಮೇ-7 ರಂದು ಲೋಕಸಭಾ ಚುನಾವಣೆಗೆ ಮತದಾನ ಹಿನ್ನಲೆ ಕಡ್ಡಾಯವಾಗಿ ಎಲ್ಲ ಕೂಲಿಕಾರರು ತಪ್ಪದೇ ಮತದಾನ ಚಲಾಯಿಸಬೇಕೆಂದು ತಿಳಿಸಿದರು. ಅಲ್ಲದೇ ಬೇಸಿಗೆ ಇದೆಯೆಂದು ಬೇರೆ ಊರಿಗೆ ಗುಳೆ ಹೋಗದೇ ಇದ್ದೂರಲ್ಲೇ ಉದ್ಯೋಗ ಖಾತ್ರಿ ಕೆಲಸ ಆರಂಭ ಮಾಡಲಾಗಿದೆ. ನಿಮ್ಮೂರಲ್ಲೇ ಉದ್ಯೋಗ ಖಾತರಿ ಕೆಲಸ ಮಾಡಿ ಮೇ-7 ರಂದು ಮತದಾನ ಚಲಾಯಿಸಿರಿ. ಸಂವಿಧಾನ ನಮಗೆ ಮತದಾನ ಎಂಬ ವಿಶೇಷ ಹಕ್ಕನ್ನು ನೀಡಿದೆ. ಹೀಗಾಗಿ ಸಂವಿಧಾನ ನೀಡಿದ ಹಕ್ಕನ್ನು ಮರೆಯದೇ ಕಡ್ಡಾಯವಾಗಿ ನಮ್ಮ ಹಕ್ಕನ್ನು ನಾವು ಚಲಾಯಿಸೋಣ ಎಂದರು.

ವಾಸನ ಗ್ರಾಮ ಪಂಚಾಯತ ಕಾರ್ಯದರ್ಶಿ ಸಿದ್ದಯ್ಯ ಮಣ್ಣೂರಮಠ ಅವರು 395 ಜನ ಕೂಲಿಕಾರರಿಗೆ ಮತದಾನ ಕುರಿತಾದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ನರೇಗಾ ಸಿಬ್ಬಂದಿ ವರ್ಗ ಹಾಗೂ ವಾಸನ ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net