ಜಗಾಪೂರ ಸಂಘಕ್ಕೆ ಬಸವರೆಡ್ಡಿ ಅಧ್ಯಕ್ಷ, ಹನುಮಪ್ಪ ಉಪಾಧ್ಯಕ್ಷ

11-nrd- sponser jagapur
Published on

ನರಗುಂದ: ತಾಲೂಕಿನ ಜಗಾಪೂರ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಬಸವರೆಡ್ಡಿ ಗೋವಿಂದರಡ್ಡಿ ಹಳೇಮನಿ, ಉಪಾಧ್ಯಕ್ಷರಾಗಿ ಹನುಮಪ್ಪ ಶಿವಪ್ಪ ದೇವಕ್ಕಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ನೂತನ ನಿರ್ದೇಶಕ ಮಂಡಳಿ ಸದಸ್ಯರಾಗಿ ಸಾಮಾನ್ಯ ಕ್ಷೇತ್ರದಿಂದ ಕೃಷ್ಣರೆಡ್ಡಿ ಗೋವಿಂದರಡ್ಡಿ ಜಕರಡ್ಡಿ, ಮಂಜು ಭಗವಂತಪ್ಪ ಜಲಗೇರಿ, ಮಲಕಾಜಪ್ಪ ರಾಮಪ್ಪ ಬನಪ್ಪನವರ, ಲಲಿತಾ ಕಲ್ಲಪ್ಪ ಹೂಲಿ, ಶಂಭುಲಿಂಗಪ್ಪ ಸಿದ್ದಪ್ಪ ಗುಂಡಳ್ಳಿ, ಶಿವರಡ್ಡಿ ದೇವರಡ್ಡಿ ಹಂಚಿನಾಳ, ಹನುಮಪ್ಪ ಶಿವಪ್ಪ ದೇವಕ್ಕಿ, ಪರಿಶಿಷ್ಟ ಜಾತಿಯಿಂದ ವಿಜಯಲಕ್ಷ್ಮೀ ಫಕೀರಪ್ಪ ಮೇಲಿನಮನಿ, ಪರಿಶಿಷ್ಟ ಪಂಗಡದಿಂದ ಅರ್ಜುನಪ್ಪ ಗೋವಿಂದಪ್ಪ ದೊಡಮನಿ, ಹಿಂದುಳಿದ ಅ ವರ್ಗದಿಂದ ತಿಪ್ಪಣ್ಣ ಧರಿಯಪ್ಪ ವಕ್ಕುಂದ, ಹಿಂದುಳಿದ ಬ ವರ್ಗದಿಂದ ಬಸವರಡ್ಡಿ ಗೋವಿಂದರಡ್ಡಿ ಹಳೇಮನಿ, ಮಹಿಳಾ ಕ್ಷೇತ್ರದಿಂದ ಕಸ್ತೂರೆವ್ವ ಹನುಮಂತಪ್ಪ ಮರೆನ್ನವರ, ಗಿರಿಜವ್ವ ಶಂಭುಲಿಂಗಪ್ಪ ಚುಳಕಿ ಒಟ್ಟು 13 ಜನ ನಿರ್ದೇಶಕ ಮಂಡಳಿ ಸದಸ್ಯರು ಆಯ್ಕೆಯಾಗಿದ್ದಾರೆ.
ಚುನಾವಣೆ ಅಧಿಕಾರಿಯಾಗಿ ಆರ್.ಎನ್. ಗಡ್ಡಿ ಕಾರ್ಯನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಶಿವಪ್ಪ ಹೂಗಾರ, ಗೋವಿಂದರಡ್ಡಿ ಸಿದ್ನಾಳ, ವೀರೇಶ ಚುಳಕಿ, ಎಂ.ಐ. ಮೇಟಿ, ಶ್ರೀಕಾಂತ ಜಕರಡ್ಡಿ, ಬಿ.ಎಸ್. ಕಾಮರಡ್ಡಿ, ಗುರುನಾಥ ಹೂಲಿ, ಡಿ.ಐ. ದೇವಕ್ಕಿ, ಸುಭಾಸ ದೇವಕ್ಕಿ, ಭೀಮಪ್ಪ ಬಾರಕೇರ, ಈರಪ್ಪ ಹೂಗಾರ, ಗುರುನಾಥ ಹೂಲಿ, ಬಸವರಡ್ಡಿ ವೆಂಕರಡ್ಡಿ ಹಂಚಿನಾಳ, ಸಿದ್ದಪ್ಪ ಮಜ್ಜಿ0ಗುಡ್ಡ, ಬಸಪ್ಪ ಮಲ್ಲಪ್ಪ ಮೇಟಿ ಇದ್ದರು.

ಜಗಾಪೂರ ಹಾಲು ಉತ್ಪಾಧಕರ ಸಂಘದಿಂದ ನಿತ್ಯ 250 ಲೀಟರ್ ಹಾಲನ್ನು ಧಾರವಾಡ ಹಾಲು ಒಕ್ಕೂಟ ಕೇಂದ್ರಕ್ಕೆ ಪೂರೈಸಲಾಗುತ್ತಿದೆ. 9 ಜನರಿಂದ ಸ್ಥಾಪಿತಗೊಂಡ ಸಂಘ ಈಗ 265 ಷೇರು ಸದಸ್ಯರನ್ನು ಹೊಂದಿದೆ. 2020 ರಲ್ಲಿ ಶುದ್ಧ ಹಾಲು ಉತ್ಪಾದನೆ ಸಂಘದ ಪ್ರಶಸ್ತಿ ಸೇರಿ ವಿವಿಧ ಸಂಘ-ಸಂಸ್ಥೆಗಳ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ ಎಂದರು.ಬಸವರಡ್ಡಿ ಹಳೇಮನಿಜಗಾಪೂರ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net