

ನರಗುಂದ: ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಆ. 30ರಂದು ಸಂಜೆ 5.30ಕ್ಕೆ ಶ್ರೀಮಠದ 349ನೇ ಮಾಸಿಕ ಶಿವಾನುಭವ ಹಾಗೂ ಚೆಂಬೆಳಕು ಚೆಲ್ಲಿದವರು ಸಮಾಜ ಸುಧಾರಕರ ಜೀವನ ದರ್ಶನ-14ನೇ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಂತಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಕಿತ್ತಲಿ ಸಿದ್ರಾಮೇಶ್ವರ ಮಠದ ಮಂಜುನಾಥ ಸ್ವಾಮಿಗಳು ಸಮ್ಮುಖ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಬಸಪ್ಪ ಕಂಠಿ, ಮಹಾಂತೇಶ ಸಾಲಿಮಠ, ಬಸವರಾಜ ಗೊಜನೂರ ಪಾಲ್ಗೊಳ್ಳುವರು. ನರಗುಂದದ ಡಾ. ಎ.ಐ. ಹುಯಿಲಗೋಳ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಗುವುದು. ನಿವೃತ್ತ ಉಪನ್ಯಾಸಕ ಎಚ್.ಎ. ಮುದಿಯಪ್ಪನವರ ‘ವಾರದ ಮಲ್ಲಪ್ಪನವರು’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಮಹಾಂತೇಶ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.