

ನರಗುಂದ: ಬೈಕ್‌ನಲ್ಲಿ ತೆರಳುವಾಗ ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ತಂದೆ, ಮಗನನ್ನು ಕೆಪಿಸಿಸಿ ಸಂಯೋಜಕ ಡಾ. ಸಂಗಮೇಶ ಕೊಳ್ಳಿಯವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಡಾ. ಸಂಗಮೇಶ ಕೊಳ್ಳಿಯವರ ಸೋಮವಾರ ಬೆಳಗ್ಗೆ ನರಗುಂದದಿಂದ ನವಲಗುಂದ ಮಾರ್ಗವಾಗಿ ಗದಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ನವಲಗುಂದ ತಾಲೂಕಿನ ಬೆಳವಟಗಿ ಕ್ರಾಸ್‌ನಲ್ಲಿ ಬೈಕ್ ಸವಾರ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ತಂದೆ ಹಾಗೂ 6 ವರ್ಷದ ಮಗ ಇಬ್ಬರೂ ಕೆಳಗೆ ಬಿದ್ದಿದ್ದರು. ವೃತ್ತಿಯಿಂದ ವೈದ್ಯರಾಗಿರುವ ಡಾ. ಸಂಗಮೇಶ ಅವರು ತಕ್ಷಣ ಇಬ್ಬರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಆಂಬುಲೆನ್ಸ್ ತಡವಾಗಿ ಬಂದಿದ್ದರಿಂದ ಪಶು ವೈದ್ಯರೊಬ್ಬರ ವಾಹನದಲ್ಲಿ ನವಲಗುಂದದ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಎಂ.ಎಂ. ಜಾವೂರ, ಬಸನಗೌಡ ಕರಿಗೌಡ್ರ, ಮಂಜುನಾಥ ಅಣ್ಣಿಗೇರಿ, ಮುತ್ತು ಕಬಾಡರ, ಪ್ರಸಾದ ಮುತ್ತಿನ, ಪ್ರವೀಣ ಮ್ಯಾಗೇರಿ, ಶರಣು ಪಲ್ಲೇದ ಇತರರಿದ್ದರು.