ವಿಜಯಸಂಕಲ್ಪ ಯಾತ್ರೆ: ಭರಪೂರ ಊಟ

IMG-20230310-WA0035(1)
Published on

ನರಗುಂದ: ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ಬಹಿರಂಗ ಸಮಾವೇಶಕ್ಕೆ ಆಗಮಿಸಿದವರಿಗೆ ಬಿಸಿಬಿಸಿ ಅಡುಗೆ ಉಣಬಡಿಸಲಾಯಿತು. ಕೃಷಿ ಇಲಾಖೆ ಹಿಂಬದಿ ಆವರಣದಲ್ಲಿ ಮುಖ್ಯ ಅಡುಗೆದಾರ ಪ್ರಕಾಶ ಬೋಳಿ ಅವರ ೧೯೦ ಜನರ ತಂಡ ೧೫ ಕ್ವಿಂಟಲ್ ಪಲಾವ್, ೧೨ ಕ್ವಿಂಟಲ್ ಶಿರಾ ತಯಾರಿಸಿದ್ದರು. ಸಮಾವೇಶಕ್ಕೆ ಕಿಕ್ಕಿರಿದು ಆಗಮಿಸಿದ್ದ ಮತಕ್ಷೇತ್ರದ ೨೫ ಸಾವಿರ ಜನರಿಗೆ ಶಿರಾ, ಪಲಾವ್, ಸಾಂಬಾರ, ಉಪ್ಪಿನಕಾಯಿ, ಬದನೆಕಾಯಿ ಪಲ್ಲೆ ಉಣಬಡಿಸಲಾಯಿತು. ಸಾರ್ವಜನಿಕರನ್ನು ನಿಯಂತ್ರಿಸುವ ಸಲುವಾಗಿ ಒಟ್ಟು,೧೫ ಕೌಂಟರ್ ಗಳ ಮುಖಾಂತರ ಮಧ್ಯಾಹ್ನದಿಂದ ರಾತ್ರಿಯವರೆಗೆ ಊಟದ ವ್ಯವಸ್ಥೆ ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net