ನರಡಮ್ಮದೇವಿ ಉತ್ಸವ ಸಂಪನ್ನ

18, srinivaspur photo-5
Published on

ಶ್ರೀನಿವಾಸಪುರ: ಕೇತಗಾನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆಯಾದ ಗಟ್ಟಹಳ್ಳಿ ನರಡಮ್ಮದೇವಿಯ ಉತ್ಸವ ಅದ್ದೂರಿಯಾಗಿ ನೆರವೇರಿತು.

ತಾಲೂಕಿನ ಕಸಬಾ ಹೋಬಳಿ, ಚಲ್ದಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕೇತಗಾನಹಳ್ಳಿಯಲ್ಲಿ ಸೋಮವಾರ ನರಡಮ್ಮ ದೇವಿಯ ಉತ್ಸಾವ ಮೂರ್ತಿಯನ್ನು ಹೊತ್ತು ಪಲಕ್ಕಿಯೊಂದಿಗೆ ವಿವಿಧ ಹೂವುಗಳಿಂದ ಅಲಂಕರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ನಾದಸ್ವರ, ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗಟ್ಟಹಳ್ಳಿ ನರಡಮ್ಮ ದೇವಿಯ ಅರ್ಚಕ ಎಂ.ಶ್ರೀರಾಮರೆಡ್ಡಿ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net