

ಕುರುಗೋಡು: ಪಟ್ಟಣದ ಬಾದನಹಟ್ಟಿ ರಸ್ತೆಯಲ್ಲಿ ಸಾಯಿಬಾಬ ಮೂರ್ತಿ ಪ್ರತಿಷ್ಠಾಪನೆ ಮಹೋತ್ಸವ ಶುಕ್ರವಾರ ಸಂಭ್ರಮದಿಂದ ಜರುಗಿತು.
ತಿರುಪತಿ ದೇವಸ್ಥಾನದ ದುರ್ಗಪ್ರಸಾದ ಹಾಗೂ ಸುಬ್ರಮಣ್ಯ ಶರ್ಮ ಮತ್ತು ತಂಡದಿಂದ ಪ್ರತಿಷ್ಠಾಪನೆಯ ಕಾರ್ಯಕ್ರಮ ನಡೆದವು. ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಶಾಂತಿ, ನೆಮ್ಮದಿ ದೊರೆಯಲಿದೆ ಎಂದರು.
ಇದನ್ನೂ ಓದಿ: ಕರ್ತವ್ಯಲೋಪ, ಇಬ್ಬರು ಶಿಕ್ಷಕರ ಅಮಾನತು
ಮೂರು ದಿನಗಳಿಂದ ಮಂದಿರದಲ್ಲಿ ಮೂಲಮಂತ್ರ, ಅಂಗಹೋಮ, ಕಳಾ, ಗಣಪತಿ ಪೂಜೆ, ಸರ್ವಮಂಡಲ ಪೂಜೆ, ಜಲಾಧಿವಾಸ, ಪಂಚಗವ್ಯಾಧಿವಾಸ ಮತ್ತು ಕ್ಷೀರಾಧಿವಾಸ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಹಿಳೆಯರಿಂದ ಭಜನೆ ಕಾರ್ಯಕ್ರಮ ನಡೆಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾಯಿರಾಮ ಸೇವಾ ಟ್ರಸ್ಟ್ ಸದಸ್ಯರು, ಮುಖಂಡರು ಸೇರಿದಂತೆ ಸುತ್ತಮುತ್ತಲಿನ ನೂರಾರು ಭಕ್ತರು ಭಾಗಹಿಸಿದ್ದರು.