ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿಗೆ ಆಯ್ಕೆ

Published on

 ನಾಪೋಕ್ಲು: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಿ. ಎಸ್. ಸುಮಿತ್ರಾ ಅವರನ್ನು ಉಪಾಧ್ಯಕ್ಷರನ್ನಾಗಿ,ಕರಿನೆರವಂಡ ಧ್ಯಾನಿ ಕುಶಾಲಪ್ಪ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ಸದಸ್ಯರಾಗಿ ಮಲ್ಲಂಡ ಶ್ರುತಿ ಮುದ್ದಪ್ಪ, ಮೀತಲ ತಂಡ ಎಂ. ಇಸ್ಮಾಯಿಲ್ ಶರಣಗೌಡ ಹರಗ, ಕಡೆಮಾಡ ಸುವಿತ್ ಸೋಮಣ್ಣ, ಚೊಕ್ಕಂಡ ನಜೀರ್ ಪಾಲಿಬೆಟ್ಟ ಎಂ.ಬಿ ವಿನ್ಸೆಂಟ್ ವಿನೋದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net