

ನಾಪೋಕ್ಲು: ಸಮೀಪದ ಬಲ್ಲಮಾವಟ್ಟಿ ದವಸ ಬಂಡಾರದ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು
ಸಂಭ್ರಮದಿಂದ ಆಚರಿಸಲಾಯಿತು. ಮಾಜಿ ಸೈನಿಕ ನೆರವಂಡ ಭೀಮಯ್ಯ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಬಂಡಾರದ ಅಧ್ಯಕ್ಷ ಬೊಟ್ಟೋಳಂಡ ಜಾನಕಿ ವಹಿಸಿದ್ದರು. ಸ್ವಾತಂತ್ರ್ಯೋತ್ಸವ ಮಹತ್ವ ಮತ್ತು
ವಿಶೇಷತೆಗಳನ್ನು ಅವರು ತಿಳಿಸಿದರು. ಸಂಘದ ಉಪಾಧ್ಯಕ್ಷ ಕೋಟೆರ ಸುಬ್ಬಯ್ಯ , ಕಾರ್ಯದರ್ಶಿ ಭರತ ಮತ್ತು ನಿರ್ದೇಶಕರು ಹಾಜರಿದ್ದರು.