ಯಾಂತ್ರೀಕೃತ ನಾಟಿಯ ಪ್ರಾತ್ಯಕ್ಷಿಕೆ

12.NPK-2
Published on


ನಾಪೋಕ್ಲು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಇಲಾಖೆ ಹಾಗೂ ಸಿಎಚ್‌ಎಸ್‌ಸಿ ವತಿಯಿಂದ ಭಾನುವಾರ ಚೆರಿಯಮನೆ ಬೋಜಪ್ಪ ಅವರ ಗದ್ದೆಯಲ್ಲಿ ಯಾಂತ್ರೀಕೃತ ನಾಟಿ ಕಾರ್ಯ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಲಾಯಿತು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಪ್ರಕಾಶ್ ಮಾತನಾಡಿ, ಕೂಲಿ ಕಾರ್ಮಿಕರ ಸಮಸ್ಯೆಗೆ ಯಾಂತ್ರೀಕೃತ ಬೇಸಾಯ ಪದ್ಧತಿ ಉತ್ತಮ ಪರಿಹಾರವಾಗಿದ್ದು, ಸರಿಯಾದ ಆಳ ಮತ್ತು ಅಂತರದಲ್ಲಿ ಸಸಿಗಳ ನಾಟಿ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದರು. ಎರಡು ಎಕರೆಯಲ್ಲಿ ಯಾಂತ್ರೀಕೃತ ನಾಟಿ ಮಾಡಲಾಯಿತು. ಯೋಜನೆಯ ಕೃಷಿ ಅಧಿಕಾರಿ ಕೆ.ಚೇತನ್, ಪ್ರಬಂಧಕರಾದ ಸಚಿನ್, ದೇವರಾಜ್, ಮೇಲ್ವಿಚಾರಕ ಹರೀಶ್ ಕುಲಾಲ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net