ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಣೆ

16.npk-1
Published on

ವಿಜಯವಾಣಿ ಸುದ್ದಿಜಾಲ, ನಾಪೋಕ್ಲು
ಕೊಣಂಜಗೇರಿ ಪಂಚಾಯತಿ ವ್ಯಾಪ್ತಿಯ ಪಾರಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿಕುಶಾಲಪ್ಪ ಅವರು ಬೆಲ್ಟ್, ಟೈ ಮತ್ತು ಗುರುತಿನ ಚೀಟಿಗಳನ್ನು ಕೊಡುಗೆಯಾಗಿ ನೀಡಿದರು.
ನಂತರ ಮಾತನಾಡಿದ ಕಟ್ಟಿಕುಶಾಲಪ್ಪ, ಈ ದೇಶದ ಮಣ್ಣು, ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದೆ. ಅದನ್ನು ಬಳಕೆಮಾಡಿಕೊಂಡ ನಾವು ಮರಳಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವುದು ಕರ್ತವ್ಯ ಎಂದರು. ಎಳವೆಯಲ್ಲೇ ಮಕ್ಕಳಿಗೆ ರಾಷ್ಟ್ರೀಯತೆ ಅರಿವು ಮೂಡಿಸಬೇಕು. ಸುಂದರ ಪರಿಸರವನ್ನು ಉಳಿಸಿ ಬೆಳೆಸುವ ಕಳಕಳಿ ರೂಢಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶಕ್ಕೆ ಉಪಯುಕ್ತನಾಗಿ ಬದುಕುವ ಪ್ರಜೆಯಾಗುವಂಥ ಶಿಕ್ಷಣ ನೀಡಬೇಕು ಎಂದು ಅವರು ಹೇಳಿದರು. ಮುಖ್ಯೋಪಾಧ್ಯಾಯ ವೇದ ಪ್ರಸಾದ್ , ಸಹ ಶಿಕ್ಷಕ ಕಿಶೋರ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ,ಹಾಜರಿದ್ದರು. ನಂತರ ಮಕ್ಕಳಿಗೆ ಸಿಹಿಯೂಟ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net