

ಮಡಿಕೇರಿ: ಸುನ್ನಿ ಯುವಜನ ಸಂಘಂ(ಎಸ್‌ವೈಎಸ್) ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜ.೫ ರಂದು ನಾಪೋಕ್ಲು ಮಾರ್ಕೆಟ್ ಎಂಬ ಆಧ್ಯಾತ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ಸಿ.ಎಂ.ಹಮೀದ್ ಮೌಲವಿ ತಿಳಿಸಿದರು.
ಅಂದು ಸಂಜೆ ೫ ಗಂಟೆಗೆ ಅಸರ್ ನಮಾಜಿನ ಬಳಿಕ ಹಿರಿಯ ವಿದ್ವಾಂಸರಾದ ಹುಸೈನ್ ಮುಸ್ಲಿಯಾರ್ ಕುಂಜಿಲ ಉಸ್ತಾದರ ನೇತೃತ್ವದಲ್ಲಿ ಚೆರಿಯಪರಂಬು ದರ್ಗಾ ಝಿಯಾರತ್ ನಡೆಯಲಿದೆ. ನಾಪೋಕ್ಲುವಿನ ಮಾರುಕಟ್ಟೆಯ ಮುಂಭಾಗ ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಸಂಚಾಲಕ ಅಬ್ದುಲ್ ಹಮೀದ್ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಂತರ ಎಸ್‌ವೈಎಸ್ ಆಮಿಲಾ ಸಮಿತಿ ವತಿಯಿಂದ ಅಬ್ದುಲ್ಲಾ ಉಸ್ತಾದ್ ನೇತೃತ್ವದಲ್ಲಿ ಶೈಖುನಾ ಶಂಸುಲ್ ಉಲಾಮಾ ಮೌಲಿದ್ ಪಾರಾಯಣ ನಡೆಯಲಿದ್ದು, ಮಗ್ರಿಬ್ ನಮಾಜಿನ ನಂತರ ಬೃಹತ್ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಗೂ ಜಿಲ್ಲೆಯ ಖಾಝಿ ಶೈಖುನಾ ಅಬ್ದುಲ್ಲಾ ಫೈಝಿ ಎಡಪಾಲ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎಸ್‌ವೈಎಸ್ ಕೊಡಗು ಜಿಲ್ಲಾ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ ವಹಿಸಲಿದ್ದಾರೆ. ಮಸ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಹಾಗೂ ದುಆ ಮಸ್ಲಿಸ್‌ನ ನೇತೃತ್ವವನ್ನು ಆಧ್ಯಾತ್ಮಿಕ ನೇತರ ಪಾಣಕ್ಕಾಡ್ ಸಯ್ಯದ್ ಮಈನ್ ಅಲಿ ಶಿಹಾಬ್ ತಂಙಳ್ ವಹಿಸಲಿದ್ದು, ಮಹ್ ಮೂನ್ ಹುದವಿ ಮಲಪ್ಪುರಂ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಹುಸೈನ್ ಮುಸ್ಲಿಯಾರ್ ಕುಂಜಿಲ, ಮಾಜಿ ಶಾಸಕ ಇಬ್ರಾಹಿಂ ಮಾಸ್ಟರ್, ನಾಪೋಕ್ಲು ಜುಮಾ ಮಸೀದಿ ಅಧ್ಯಕ್ಷ ಎಂ.ಹೆಚ್.ಅಬ್ದುಲ್ ರಹಮಾನ್, ನಾಲ್ಕುನಾಡು ಮುಸ್ಲಿಂ ಜಮಾಅತ್ ಮುಖಂಡ ಪಿ.ಎಂ.ಖಾಸಿಂ, ಸಮಸ್ತ ಉಮರಾ ನಾಯಕರಾದ ಯಾಕೂಬ್ ಬಜೆಗುಂಡು, ಮಾಹಿನ್ ಹಾಜಿ, ಇಸ್ಮಾಯಿಲ್, ಅಶ್ರಫ್ ಫೈಝಿ ಸೇರಿದಂತೆ ಮತ್ತಿತರ ಗಣ್ಯರು ಹಾಗೂ ಉಲಮಾ, ಉಮರಾ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದ ಅವರು, ಕಾರ್ಯಕ್ರಮದಲ್ಲಿ ಸ್ತ್ರೀಯರಿಗೆ ವಿಶೇಷ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಲ್ ಹಮೀದ್ ಹಾಜಿ, ಸದಸ್ಯ ಅಬ್ದುಲ್ ರಶೀದ್, ನಾಪೋಕ್ಲು ವಲಯ ಸಮಿತಿ ಅಧ್ಯಕ್ಷ ಹಂಝ ಮೌಲವಿ ಹಾಗೂ ಸದಸ್ಯ ಆಬಿದ್ ಹಾಜಿ ಉಪಸ್ಥಿತರಿದ್ದರು.