ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ

6.npk-1
Published on

ನಾಪೋಕ್ಲು: ಇಲ್ಲಿನ ಇಂದಿರಾ ನಗರದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಎ.ಎಸ್ ಪೊನ್ನಣ್ಣ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. 10 ಲಕ್ಷ ರೂ. ಅನುದಾನದಲ್ಲಿ ಭವನ ನಿರ್ಮಾಣಗೊಳ್ಳಲಿದೆ.
ಇಂದಿರಾನಗರ ವಿವೇಕಾನಂದ ಯುವಕ ಸಂಘದ ಮುಖಂಡ ಜಲೇಂದ್ರ ಮಾತನಾಡಿ, ಸಂಘದ ಪದಾಧಿಕಾರಿಗಳು ಸಮುದಾಯ ಭವನ ನಿರ್ಮಿಸಿಕೊಡುವ ಬಗ್ಗೆ ಈ ಹಿಂದೆ ಶಾಸಕರಿಗೆ ಮನವಿ ಮಾಡಿಕೊಡಿದ್ದರು. ಅದು ಈಗ ಫಲ ನೀಡಿದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಕೆಡಿಪಿ ಸದಸ್ಯ ಅಬ್ದುಲ್ ರಹಿಮಾನ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕೊಡಗು ಯೂಥ್ ಕಾಂಗ್ರೆಸ್ ಉಪಾಧ್ಯಕ್ಷ ವೈ.ಸಿ. ಕತ್ತನಿರ, ಜಿಲ್ಲಾ ಕಾರ್ಮಿಕ ಸಂಘದ ಉಪಾಧ್ಯಕ್ಷ ಪರವಂಡ ಮಿರ್ಶಾದ್, ಕುಲ್ಲೇಟಿರ ಅರುಣ್ ಬೇಬ, ಸಾಬಾ ತಿಮ್ಮಯ್ಯ , ಶಶಿ, ಪಟ್ಟಾಭಿ ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net