ನೇತಾಜಿ ವಿದ್ಯಾಸಂಸ್ಥೆ ಪದಾಧಿಕಾರಿಗಳ ಆಯ್ಕೆ

17.npk-4
Published on

ನಾಪೋಕ್ಲು: ಬಲ್ಲಮಾವಟಿಯ ನೇತಾಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷರಾಗಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಉಪಾಧ್ಯಕ್ಷರಾಗಿ ಚಂಗೇಟಿರ ಕುಮಾರ್ ಸೋಮಣ್ಣ, ಗೌರವ ಕಾರ್ಯದರ್ಶಿಯಾಗಿ ಮುಕ್ಕಾಟಿರ ವಿನಯ್, ಕರಾಸ್ಪಾಂಡೆಂಟ್ ಆಗಿ ತೋಲಂಡ ಅರುಣ್ ಕಾವೇರಪ್ಪ ಆಯ್ಕೆಯಾದರು. ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬೊಟ್ಟೋಳಂಡ ಗಿರೀಶ್ ಮಾದಪ್ಪ, ತಾಪಂಡ ವರುಣ್ ಸುಬ್ಬಯ್ಯ, ಬೈರುಡ ವಸಂತ, ಅಪ್ಪುಮಣಿಯಂಡ ಬನ್ಸಿ ಭೀಮಯ್ಯ, ನೆರವಂಡ ಅಪ್ಪಣ್ಣ, ಅಪ್ಪಚ್ಚೀರ ಗೌತಮ್ ಕಾರ್ಯಪ್ಪ ಮತ್ತು ನಿಕಟ ಪೂರ್ವ ಗೌರವ ಕಾರ್ಯದರ್ಶಿ ಚಂಗೇಟಿರ ಅಚ್ಚಯ್ಯ ಇದ್ದರು. ನೂತನ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net