ಸತತ ಪ್ರಯತ್ನವಿದ್ದರೆ ಸಾಧನೆ ಸುಲಭ

198 book Release 2
ಚನ್ನರಾಯಪಟ್ಟಣದಲ್ಲಿ ಲೇಖಕ ಎಚ್. ಡಿ.ವೆಂಕಟೇಶ್ ಪ್ರಸಾದ್ ವಿರಚಿತ ನಾನ್ಯಾರು ಕೃತಿಯನ್ನು ರಂಗ ನಿರ್ದೇಶಕ ಜನಾರ್ದನ ಬಿಡುಗಡೆ ಮಾಡಿದರು. ಸುಬ್ಬು ಹೊಲೆಯರ್, ಸಂತೋಷ್, ಪ್ರೊ. ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಚ.ನಾ.ಅಶೋಕ್ ಇತರರು ಇದ್ದರು.
Published on

ಚನ್ನರಾಯಪಟ್ಟಣ: ಸತತ ಪ್ರಯತ್ನವಿದ್ದರೆ ಮಾತ್ರ ಯಾವುದೇ ರಂಗದಲ್ಲಿ ಸಾಧನೆ ಸುಲಭ ಎಂದು ರಂಗ ನಿರ್ದೇಶಕ ಜನಾರ್ದನ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಲೇಖಕ ಎಚ್.ಡಿ.ವೆಂಕಟೇಶ್ ಪ್ರಸಾದ್ ವಿರಚಿತ ‘ನಾನ್ಯಾರು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿ, ಬಡತನ, ಸಮುದಾಯ, ಕೆಳವರ್ಗದ ಚಿಂತನೆಯ ಕೃತಿಗಳು ಪ್ರಕಟಣೆ ಭಾಗ್ಯ ಕಾಣುವುದು ಬಹಳ ಕಷ್ಟ. ಹಾಗಿದ್ದೂ ಯಾರ ಸಹಾಯವನ್ನೂ ನಿರೀಕ್ಷೆ ಮಾಡದೆ ಕೃತಿ ಪ್ರಕಟಿಸಿರುವುದು ವೆಂಕಟೇಶ್ ಪ್ರಸಾದ್ ಅವರ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ಕವಿ ಸುಬ್ಬು ಹೊಲೆಯಾರ್ ಪುಸ್ತಕ ಕುರಿತು ಮಾತನಾಡಿ, ಈ ಕೃತಿ ಸಮಾನತೆಯನ್ನು ಬಿತ್ತುವ ಕೆಲಸ ಮಾಡಿದೆ. ಮಡಿವಂತಿಕೆಯ ಸೂಕ್ಷ್ಮತೆ ತಿಳಿಸಿದೆ ಎಂದರು.

ನಾಟಕಕಾರ ಡಾ.ಚಂದ್ರು ಕಾಳೇನಹಳ್ಳಿ, ಪ್ರಾಂಶುಪಾಲ ಕೆ.ಎಂ.ಸಂತೋಷ್, ಸಾಹಿತಿ ಪ್ರೊ.ಹೊನ್ನ ಶೆಟ್ಟಿಹಳ್ಳಿ ಗಿರಿರಾಜ್, ಪರಿಸರ ಪ್ರೇಮಿ ಚ.ನಾ.ಅಶೋಕ್, ಕೃತಿಕಾರ ವೆಂಕಟೇಶ್ ಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net