ನಂತೂರು ಜಂಕ್ಷನ್ ರಸ್ತೆ ಹೊಂಡ ಮುಚ್ಚಿದ ಸಂಚಾರಿ ಪೊಲೀಸರು

mng--22 sep nanthoor road
Published on

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಜಂಕ್ಷನ್‌ನಲ್ಲಿ ರಸ್ತೆಗಳು ಹೊಂಡ ಗುಂಡಿಗಳಿಂದ ಸಂಚರಿಸಲು ಸವಾರರು ದಿನನಿತ್ಯ ಪರದಾಡುವಂತಾಗಿದ್ದು, ಶುಕ್ರವಾರ ಸಂಚಾರಿ ಪೊಲೀಸರೇ ಸ್ವತಃ ಹೊಂಡ ಗುಂಡಿಗಳಿಗೆ ಕಾಂಕ್ರಿಟ್ ಹಾಕಿ ಮುಚ್ಚಿದ್ದಾರೆ.


ಹೊಂಡ ಗುಂಡಿಗಳಿಂದಾಗಿ ಜಂಕ್ಷನ್‌ನಲ್ಲಿ ಅಪಘಾತಗಳು ಹೆಚ್ಚುತ್ತಿದ್ದು, ಜತೆಗೆ ದಿನವಿಡೀ ವಾಹನ ದಟ್ಟಣೆ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇಲ್ಲಿ ಕೆಲಸ ಮಾಡುವ ಸಂಚಾರಿ ಪೊಲೀಸರು ದಿನಂಪ್ರತಿ ವಾಹನ ಸವಾರರು ಪಡುತ್ತಿರುವ ಪಾಡು ಹಾಗೂ ವಾಹನ ದಟ್ಟಣೆ ನಿರ್ವಹಣೆ ಸವಾಲನ್ನು ತಡೆಯುವ ಉದ್ದೇಶದಿಂದ ಹೊಂಡ ಮುಚ್ಚಲು ಮುಚ್ಚಿದ್ದಾರೆ. ಪೊಲೀಸ್ ಸಿಬ್ಬಂದಿಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.


ಕೆಪಿಟಿ ವೃತ್ತದಲ್ಲೂ ಹೊಂಡಗಳಾಗಿದ್ದು, ಸರಿಪಡಿಸಬೇಕಾದ ಎನ್‌ಎಚ್‌ಎಐ ಅಧಿಕಾರಿಗಳು ಮೌನ ವಹಿಸಿದ್ದಾರೆ. ದ್ವಿಚಕ್ರ ವಾಹನಗಳು ನಿರಂತರ ಅಪಘಾತಕ್ಕೀಡಾಗುತ್ತಿದ್ದು, ಪ್ರಾಣ ಹಾನಿಯಾದರೂ ಅಧಿಕಾರಿಗಳು ರಸ್ತೆ ಸರಿ ಮಾಡುವ ಗೋಜಿಗೆ ಹೋಗಿಲ್ಲ. ಅವರನ್ನು ಎಚ್ಚರಿಸಬೇಕಾದ ಜನಪ್ರತಿನಿಧಿಗಳು ನಿರಂತರ ಅದೇ ರಸ್ತೆಯಲ್ಲಿ ಸಂಚರಿಸುವಾಗ ಸಮಸ್ಯೆ ಗಮನಕ್ಕೆ ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net