ನ್ಯಾನೋ ಯೂರಿಯಾ ಬಳಕೆ ಅರಿವು ಮೂಡಿಸಿ

Untitled design (3)
ಸಣಾಪುರದಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪರಣೆ ಪ್ರಾತ್ಯಕ್ಷಿಕೆಗೆ ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕ ವೆಂಕಟರಮಣ ರೆಡ್ಡಿ ಚಾಲನೆ ನೀಡಿದರು. ಅಧಿಕಾರಿಗಳಾದ ಕೆಂಗೇಗೌಡ, ಕೆ.ಮಲ್ಲಿಕಾರ್ಜುನರೆಡ್ಡಿ, ಡಾ.ಸಿ.ಆರ್.ಅಭಿಲಾಷ ಇತರರಿದ್ದರು.
Published on

ಕಂಪ್ಲಿ: ನ್ಯಾನೋ ಯೂರಿಯೂ, ನ್ಯಾನೋ ಡಿಎಪಿ ಬಳಸುವಲ್ಲಿ ರೈತರು ಜಾಗೃತಿ ತೋರಬೇಕು ಎಂದು ಬೆಂಗಳೂರಿನ ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕ ವೆಂಕಟರಮಣರೆಡ್ಡಿ ಹೇಳಿದರು.


ತಾಲೂಕಿನ ಸಣಾಪುರ ಗ್ರಾಮದ ರೈತ ಶ್ರೀನಿವಾಸ್ ಅವರ ಭತ್ತದ ಗದ್ದೆಯಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಸಿಂಪಡಿಸುವ ಪ್ರಾತ್ಯಕ್ಷಿಕ್ಷೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ನ್ಯಾನೋ ಯೂರಿಯೋ, ನ್ಯಾನೋ ಡಿಎಪಿ ಬಳಕೆ ಕುರಿತು ವಿತರಕರು ರೈತರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು. ನಾಲ್ವರು ರೈತರಿಗೆ ನ್ಯಾನೋ ಗೊಬ್ಬರ ಸಿಂಪಡಿಸುವ ಸ್ಪ್ರೆಯರ್ಸ್‌ ವಿತರಿಸಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ತೆಂಗಿನಸಸಿ ನೆಟ್ಟು ನೀರುಣಿಸಿದರು.

ಬಳ್ಳಾರಿಯ ಉಪ ನಿರ್ದೇಶಕ ಕೆಂಗೇಗೌಡ, ಜಂಟಿ ಕೃಷಿ ನಿರ್ದೇಶಕ ಕೆ.ಮಲ್ಲಿಕಾರ್ಜುನರೆಡ್ಡಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಡಾ.ಸಿ.ಆರ್.ಅಭಿಲಾಷ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net