ಡ್ರೋನ್‌ನಿಂದ ನ್ಯಾನೋ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ

IMG-20241010-WA0301
ಅರಸೀಕೆರೆ ಗ್ರಾಮಾಂತರ ತಾಲೂಕಿನ ಬಾಣಾವರ ಹೋಬಳಿಯ ಮಲ್ಲಾಪುರದಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆಯ ಪ್ರಾತ್ಯಕ್ಷಿಕೆ ನೀಡಲಾಯಿತು. ಪ್ರಭಾವತಿ, ಸೋಮಶೇಖರ್, ಪುನೀತ್, ಜಯರಾಮ, ಮಂಜುನಾಥ್ ಇತರರಿದ್ದರು.
Published on

ಬಾಣಾವರ: ಇತ್ತೀಚಿನ ದಿನಗಳಲ್ಲಿ ರೈತರಿಗೆ ಸವಾಲಾಗಿರುವುದು ದಿನಗೊಲಿ ರೈತ ಕಾರ್ಮಿಕರ ಕೊರತೆ. ಇದನ್ನು ನೀಗಿಸುವ ಸಲುವಾಗಿ ಬಾಣಾವರ ಹೋಬಳಿಯ ಮಲ್ಲಾಪುರ ರಾಗಿ ಮತ್ತು ಮೆಕ್ಕೆ ಜೋಳಗಳಿಗೆ ನ್ಯಾನೋ ಯೂರಿಯಾವನ್ನು ಆತ್ಮ ಯೋಜನೆಯಲ್ಲಿ ಡ್ರೋನ್ ಮೂಲಕ ಸಿಂಪಡಣೆ ಮಾಡುವ ಪ್ರಾತ್ಯಕ್ಷಿಕೆಯನ್ನು ಬುಧವಾರ ಅರಸೀಕೆರೆ ಕೃಷಿ ಇಲಾಖೆ ಹಾಗೂ ಬಾಣಾವರ ರೈತ ಸಂಪರ್ಕ ಕೇಂದ್ರದ ವತಿಯಿಂದ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಕಾರಿ ಪ್ರಭಾವತಿ ಮಾತನಾಡಿ, ಕಡಿಮೆ ಕರ್ಚಿನಲ್ಲಿ ಡ್ರೋನ್ ಸಹಾಯದಿಂದ ನ್ಯಾನೋ ಯೂರಿಯಾವನ್ನು ಸಿಂಪಡಣೆ ಮಾಡಿ ಬೆಳೆಗಳನ್ನು ಉತ್ತಮವಾಗಿ ಬೆಳೆಯಬೇಕು. ಇದರ ಸದುಪಯೋಗ ಪಡೆದುಕೊಳ್ಳಲೆಂದು ರೈತರಿಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ ಎಂದರು.
ತಾಂತ್ರಿಕ ವ್ಯವಸ್ಥಾಪಕ ಪುನೀತ್, ಲೆಕ್ಕ ಪರಿಶೋಧಕ ಸೋಮಶೇಖರ್, ಕೃಷಿ ಇಲಾಖೆ ಸಹಾಯಕರು ಹಾಗೂ ರೈತರಾದ ಜಯರಾಮ್, ಮಂಜುನಾಥ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net