ರೈತರ ಮಿತ್ರ ನ್ಯಾನೋ ರಸಗೊಬ್ಬರ

ಜಾಲಹಳ್ಳಿಯಲ್ಲಿ ಪಿಎಂ ಪ್ರಣಾಮ್ ರೈತರ ಸಂಗೋಷ್ಠಿ ಹಾಗೂ ನ್ಯಾನೋ ಗೊಬ್ಬರ ಜಾಗೃತಿ ಕಾರ್ಯಕ್ರಮದಲ್ಲಿ ವರ್ತಕ ಸಂಜೀವರೆಡ್ಡಿ ಸಾಹುಕಾರ, ಕೃಷಿ ಅಧಿಕಾರಿಗಳಾದ ಆಂಜನೇಯ ರಾಠೋಡ್, ರಂಗಪ್ಪ, ಪ್ರಮುಖರಾದ ಮಲ್ಲಿಕಾರ್ಜುನ ಮಲ್ಕಾಪುರ, ಶಂಕರಗೌಡ ಪೊ.ಪಾ, ಶ್ರೀನಿವಾಸ್ ರೆಡ್ಡಿ, ಮಾನಯ್ಯ, ಶಿವಪ್ಪ ಇತರರಿದ್ದರು.
ಜಾಲಹಳ್ಳಿಯಲ್ಲಿ ಪಿಎಂ ಪ್ರಣಾಮ್ ರೈತರ ಸಂಗೋಷ್ಠಿ ಹಾಗೂ ನ್ಯಾನೋ ಗೊಬ್ಬರ ಜಾಗೃತಿ ಕಾರ್ಯಕ್ರಮದಲ್ಲಿ ವರ್ತಕ ಸಂಜೀವರೆಡ್ಡಿ ಸಾಹುಕಾರ, ಕೃಷಿ ಅಧಿಕಾರಿಗಳಾದ ಆಂಜನೇಯ ರಾಠೋಡ್, ರಂಗಪ್ಪ, ಪ್ರಮುಖರಾದ ಮಲ್ಲಿಕಾರ್ಜುನ ಮಲ್ಕಾಪುರ, ಶಂಕರಗೌಡ ಪೊ.ಪಾ, ಶ್ರೀನಿವಾಸ್ ರೆಡ್ಡಿ, ಮಾನಯ್ಯ, ಶಿವಪ್ಪ ಇತರರಿದ್ದರು.
Published on

ದೇವದುರ್ಗ: ಮಣ್ಣಿನ ಫಲವತ್ತತೆ ಉಳಿಸಲು ಹಾಗೂ ರಸಗೊಬ್ಬರ ಅಭಾವ ನೀಗಿಸಲು ಕೇಂದ್ರ ಸರ್ಕಾರ ದ್ರವರೂಪದ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಸಂಶೋಧಿಸಿದ್ದು, ರೈತ ಮಿತ್ರವಾಗಿದೆ ಎಂದು ವರ್ತಕ ಸಂಜೀವರೆಡ್ಡಿ ಸಾಹುಕಾರ ಹೇಳಿದರು.

ತಾಲೂಕಿನ ಜಾಲಹಳ್ಳಿಯಲ್ಲಿ ಕೃಷಿ ಇಲಾಖೆ, ಜೈಕಿಸಾನ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಿಎಂ ಪ್ರಣಾಮ್ ರೈತರ ಸಂಗೋಷ್ಠಿ ಹಾಗೂ ನ್ಯಾನೋ ಗೊಬ್ಬರ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಜತೆಗೆ ಸರ್ಕಾರ ಹಾಗೂ ರೈತರಿಗೆ ಆರ್ಥಿಕ ಹೊರೆಯಾಗಲಿದೆ. ಯಾವುದೇ ರಸಗೊಬ್ಬರ ಹಾಕಿದರೂ ಬೆಳೆಗಳು ಶೇ.30 ಸತ್ವ ಪಡೆಯುತ್ತವೆ. ಉಳಿದ ಶೇ.70 ಸತ್ವ ಭೂಮಿಗೆ ಸೇರಲಿದ್ದು, ಮಣ್ಣಿನಲ್ಲಿರುವ ಜೀವಿಗಳಿಗೆ ಹಾನಿಯಾಗುತ್ತದೆ.

ನ್ಯಾನೋ ದ್ರವರೂಪದ ಗೊಬ್ಬರ ಬೆಳೆಗಳಿಗೆ ಸಿಂಪಡಿಸಿದರೆ ಶೇ.100 ಸತ್ವ ನೇರವಾಗಿ ಬೆಳೆಗೆ ಸಿಗಲಿದೆ. ಸಮಯ ಹಾಗೂ ಹಣ ಉಳಿತಾಯವಾಗಲಿದೆ. ಚೀನಾದಿಂದ ಯೂರಿಯಾ ಆಮದು ಬಂದ್ ಆಗಿದ್ದು, ಬೇರೆ ಕಡೆ ಹಾಗೂ ಭಾರತದಲ್ಲಿ ತಯಾರಿಸಿದ ಗೊಬ್ಬರ ನೀಡಲಾಗುತ್ತಿದೆ. ಗೊಬ್ಬರದ ಬರ ನೀಗಿಸುವ ಜತೆ ಭೂಮಿಯ ಫಲವತ್ತತೆ ಉಳಿಸಲು ನ್ಯಾನೋ ತಂತ್ರಜ್ಞಾನ ಸಂಶೋಧಿಸಲಾಗಿದೆ. ರೈತರು ನಿರ್ಭಯವಾಗಿ ನ್ಯಾನೋ ರಸಗೊಬ್ಬರ ಬಳಸಿ ಉತ್ತಮ ಇಳುವರಿ ಪಡೆಯಬಹುದು ಎಂದರು.

ಕೃಷಿ ಅಧಿಕಾರಿಗಳಾದ ಆಂಜನೇಯ ರಾಠೋಡ್, ರಂಗಪ್ಪ, ಪ್ರಮುಖರಾದ ಮಲ್ಲಿಕಾರ್ಜುನ ಮಲ್ಕಾಪುರ, ಶಂಕರಗೌಡ ಪೊ.ಪಾ, ಶ್ರೀನಿವಾಸ್ ರೆಡ್ಡಿ, ಮಾನಯ್ಯ, ಶಿವಪ್ಪ, ರಾಮಣ್ಣ, ಹನುಮಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net