ನಿರ್ದೇಶಕರಾಗಿ ನಂಜುಂಡಸ್ವಾಮಿ ಆಯ್ಕೆ

20 yelandur 01
ಚುನಾವಣೆಯಲ್ಲಿ ಜಯಶೀಲರಾದ ನಂಜುಂಡಸ್ವಾಮಿ ಅವರನ್ನು ನಿರ್ದೇಶಕರು ಅಭಿನಂದಿಸಿದರು. ಶಿವಮೂರ್ತಿ, ಪ್ರೇಮ, ಅರುಂಧತಿ, ಅಶೋಕ್, ಡಿ.ಶ್ರೀನಿವಾಸಮೂರ್ತಿ ಇದ್ದರು.
Published on

ಯಳಂದೂರು: ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕರ ಚುನಾವಣೆಯಲ್ಲಿ ತಾಲೂಕಿನ ಮದ್ದೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಂಜುಂಡಸ್ವಾಮಿ ಆಯ್ಕೆಯಾದರು.

ಸಂಘದ ಪರವಾಗಿ ಸ್ಪರ್ಧಿಸಲು ಮತ್ತು ಮತ ಚಲಾಯಿಸಲು ಒಬ್ಬ ಪ್ರತಿನಿಧಿಯನ್ನು ಚುನಾವಣೆ ಮೂಲಕ ಆಯ್ಕೆ ಮಾಡಬೇಕಾಗಿರುವುದರಿಂದ ಇತ್ತೀಚೆಗೆ ಚುನಾವಣೆ ನಡೆಯಿತು. ಇದರಲ್ಲಿ ನಂಜುಂಡಸ್ವಾಮಿ ಒಂದು ಮತದ ಅಂತರದಿಂದ ಜಯಶೀಲರಾದರು.

ಸಂಘದಲ್ಲಿ 12 ನಿರ್ದೇಶಕರಿದ್ದು, ಎಂಡಿಸಿಸಿ ಬ್ಯಾಂಕ್ ಪ್ರತಿನಿಧಿ ಸೇರಿ ಒಟ್ಟು 13 ಮತಗಳಿದ್ದವು. ಆದರಲ್ಲಿ ಬಿ.ಪಿ.ಪುಟ್ಟಮಾದಪ್ಪ 6 ಮತ ಪಡೆದರೆ, ನಂಜುಂಡಸ್ವಾಮಿ 7 ಮತ ಪಡೆದು 1 ಮತದ ಅಂತರದಿಂದ ಗೆದ್ದು ಆಯ್ಕೆಯಾದರು.

ಸಂಘದ ನಿರ್ದೇಶಕರಾದ ಶಿವಮೂರ್ತಿ, ಪ್ರೇಮ, ಅರುಂಧತಿ, ಅಶೋಕ್, ಡಿ.ಶ್ರೀನಿವಾಸಮೂರ್ತಿ, ಸಂಘದ ಕಾರ್ಯದರ್ಶಿ ರಂಗಸ್ವಾಮಿ, ಎಂಡಿಸಿಸಿ ಬ್ಯಾಂಕ್ ಪ್ರತಿನಿಧಿ ನಿಂಗರಾಜು, ಚುನಾವಣಾಧಿಕಾರಿ ಸುಭಾಷಿಣಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net