ರೈತರ ಧ್ವನಿಯಾಗಿದ್ದ ನಂಜುಂಡಸ್ವಾಮಿ

14 RON 1
Published on

ರೋಣ: ರೈತರಿಗೆ ಆಗುತ್ತಿದ್ದ ಅನ್ಯಾಯಗಳ ವಿರುದ್ಧ ಸಿಡಿದೆದ್ದು ಹೋರಾಟದ ಮೂಲಕ ರೈತರಿಗೆ ನ್ಯಾಯ ಒದಗಿಸಿ ಕೃಷಿ ಕ್ಷೇತ್ರ ಬಲಪಡಿಸಿದ ಕೀರ್ತಿ ರೈತ ಹೋರಾಟಗಾರ ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಮುತ್ತಣ್ಣ ಚೌಡರಡ್ಡಿ ಹೇಳಿದರು. ಗುರುವಾರ ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಎಂ.ಡಿ. ನಂಜುಂಡಸ್ವಾಮಿ ಅವರ 89ನೇ ಜನ್ಮದಿನ ಆಚರಿಸಿ ಮಾತನಾಡಿದ ಅವರು, 1980ರಲ್ಲಿ ರೈತರಿಗೆ ಹಾಗೂ ಕಾರ್ಮಿಕರಿಗೆ ಸರ್ಕಾರದಿಂದ ಆಗುತ್ತಿದ್ದ ಅನ್ಯಾಯದ ವಿರುದ್ಧ ಸಂಘಟಿತ ಹೋರಾಟ ಮಾಡಿದರು. ನಿರಂತರ ಚಳವಳಿ ನಡೆಸಿ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅಂತಹ ಮಹಾ ವ್ಯಕ್ತಿಯ ಆದರ್ಶಗಳು ರೈತಕುಲಕ್ಕೆ ಮಾದರಿಯಾಗಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net