

ಬೈಲಹೊಂಗಲ: ಸಮೀಪದ ಮರಕುಂಬಿ ಗ್ರಾಮದ ಆನಂದ ವಾಲಿ ತೋಟದಲ್ಲಿ ನೇಗಿಲ ಯೋಗಿ ರಾಜ್ಯ ರೈತ ಸಂಘ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಬೋಳನ್ನವರ ನೇತತ್ವದಲ್ಲಿ ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ 89ನೇ ಜಯಂತಿ ಆಚರಿಸಲಾಯಿತು.
ಶಂಕರ ಬೋಳನ್ನವರ ನಂಜುಂಡಸ್ವಾಮಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ರೈತರ ಸಮಸ್ಯೆಗಳನ್ನು ಹೋಗಲಾಡಿಸಲು ರೈತ ಸಂಘ ಹುಟ್ಟುಹಾಕಿದ ಮಹಾನ್ ಚೇತನ ನಂಜುಂಡಸ್ವಾಮಿ. ಅವರು ದೇಶದ ಎಲ್ಲ ರೈತರ ಶಕ್ತಿ ಮತ್ತು ಸ್ಫೂರ್ತಿ. ಅವರು ಹಾಕಿ ಕೊಟ್ಟ ಮಾರ್ಗ, ಆದರ್ಶಗಳನ್ನು ಪಾಲಿಸೋಣ ಎಂದರು.
ಉಪನ್ಯಾಸಕ ರಮೇಶ ಯರಗಟ್ಟಿ ಮಾತನಾಡಿ, ನಂಜುಂಡಸ್ವಾಮಿ ಬಾಲ್ಯ, ಶಿಕ್ಷಣ, ಹೋರಾಟಗಳು, ರಾಜಕೀಯ, ಸಮಾಜದ ಕಳಕಳಿ ಬಗ್ಗೆ ರೈತರಿಗೆ ತಿಳಿಸಿದರು. ಸುರೇಶ ವಾಲಿ, ಮಹಾಂತೇಶ ಬೋಳನ್ನವರ, ಜಗದೀಶ ಬೋಳನ್ನವರ, ಅನಿಲ ಗಿರನವರ, ಬಸವರಾಜ ಜಂಬಗಿ, ರುದ್ರಗೌಡ ಪಾಟೀಲ, ಅದಶ್ಯಪ್ಪ ಹುಚ್ಚನವರ, ಆನಂದ ಹಿರೇಮಠ, ಪ್ರಗತಿಪರ ಕಷಿಕ ಆನಂದ ವಾಲಿ, ಸಂಗಪ್ಪ ಕಾದ್ರೊಳ್ಳಿ ಇತರರಿದ್ದರು.