ಕೆಂಪಿಸಿದ್ದನಹುಂಡಿ ಗ್ರಾಪಂಗೆ ನಂಜಯ್ಯ ಅಧ್ಯಕ್ಷ

Oplus_131072
ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರದ ಕೆಂಪಿಸಿದ್ದನ ಹುಂಡಿ ಗ್ರಾಮದಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಂಜಯ್ಯ, ಉಪಾಧ್ಯಕ್ಷರಾಗಿ ಶೋಭಾ ಆಯ್ಕೆಯಾದರು. ಗ್ರಾಪಂ ಸದಸ್ಯ ತೊರೆಮಾವು ಟಿ.ಡಿ.ಗಿರೀಶ್ ಸೇರಿದಂತೆ ಇತರರಿದ್ದರು.
Published on

ನಂಜನಗೂಡು: ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಂಜಯ್ಯ, ಉಪಾಧ್ಯಕ್ಷರಾಗಿ ಎಚ್.ಎಸ್.ಶೋಭಾ ಆಯ್ಕೆಯಾಗಿದ್ದಾರೆ.

ತೆರವಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸಂಘದ ಆವರಣದಲ್ಲಿ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಗ್ರಾಪಂ ಒಟ್ಟು 14 ಸದಸ್ಯರ ಬಲ ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ನಂಜಯ್ಯ ಮತ್ತು ಆನಂದ್ ನಾಮಪತ್ರ ಸಲ್ಲಿಸಿದ್ದರು. ಎಂಟು ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಂಜಯ್ಯ ಜಯಗಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಎಸ್.ಶೋಭಾ ಮತ್ತು ಶಿವಕುಮಾರಿ ನಾಮಪತ್ರ ಸಲ್ಲಿಸಿದ್ದು, ಶೋಭಾ 9 ಮತ ಪಡೆದು ಜಯ ಗಳಿಸಿದರು. ಚುನಾವಣಾ ಅಧಿಕಾರಿಯಾಗಿ ಸೋಮಶೇಖರ್ ಕರ್ತವ್ಯ ನಿರ್ವಹಿಸಿದ್ದರು.

ಗ್ರಾಪಂ ಸದಸ್ಯ ಹಾಗೂ ಗ್ರಾ.ಪಂ. ಒಕ್ಕೂಟದ ಅಧ್ಯಕ್ಷ ಟಿ.ಡಿ.ಗಿರೀಶ್, ಹೆಜ್ಜೆಗೆ ಪದ್ಮಪಾಣಿ, ಶೃತಿ ಬೀರಯ್ಯ, ಚಿನ್ನೂರಮ್ಮ ಸಿದ್ದು, ಗಂಗಾಧರ್, ಶಿವಕುಮಾರಿ, ಮುಖಂಡರಾದ ವಳಗೆರೆ ಶ್ರೀಕಂಠ, ತೊರೆಮಾವು ವೆಂಕಟೇಶ, ಪಿಡಿಒ ಪ್ರಕಾಶ್, ಕಾರ್ಯದರ್ಶಿ ಮಣ್ಣೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net