ನಂದೀತಳೆ ಸಹಕಾರ ಸಂಘ: ‘ಎ’ ಶ್ರೇಣಿ ಅಬಾಧಿತ

24-ANP-P1
ಆನಂದಪುರ ಸಮೀಪದ ನಂದೀತಳೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು.
Published on

ಆನಂದಪುರ: ಸಂಘದ ಎಲ್ಲ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಸದಸ್ಯರು ಸಹಕಾರ ನೀಡುತ್ತಿರುವ ಕಾರಣ ಸಂಘ ಸತತವಾಗಿ 8 ವರ್ಷಗಳಿಂದ ಎ ಶ್ರೇಣಿಯಲ್ಲಿ ಮುನ್ನಡೆಯುತ್ತಿದೆ ಎಂದು ನಂದೀತಳೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಗುರುಮೂರ್ತಿ ತಿಳಿಸಿದರು.

ಭಾನುವಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಸಾಲಿನಲ್ಲಿ ಸಂಘ 39 ಲಕ್ಷ ರೂ. ಲಾಭ ಗಳಿಸಿದೆ. 2586 ಸದಸ್ಯರಿದ್ದು, ಮುಂದಿನ ವರ್ಷ 3 ಸಾವಿರ ಸದಸ್ಯ ಬಲ ಹೊಂದುವ ಗುರಿ ಹೊಂದಲಾಗಿದೆ ಎಂದರು.
ಲಾಭಾಂಶದಲ್ಲಿ ಶೇ.10ನ್ನು ಷೇರುದಾರರಿಗೆ ವಿತರಿಸಲು ನಿರ್ಧರಿಸಲಾಗಿದೆ. 13.5 ಕೋಟಿ ರೂ. ಸಾಲ ವಿತರಿಸಲಾಗಿದೆ. ಮುಂದಿನ ವರ್ಷ 16 ಕೋಟಿ ರೂ. ಸಾಲ ವಿತರಿಸುವ ಗುರಿ ಇದೆ. 7 ಕೋಟಿ ರೂ. ಠೇವಣಿ ಸಂಗ್ರಹ ಗುರಿಯಿದ್ದು, ಸಾಗರ ತಾಲೂಕಿನಲ್ಲಿಯೇ ಮಾದರಿ ಸಹಕಾರ ಸಂಘವಾಗಿ ರೂಪುಗೊಂಡಿರುವುದು ಹೆಮ್ಮೆ ಮೂಡಿಸಿದೆ ಎಂದರು.
ಉಪಾಧ್ಯಕ್ಷ ಹುರುಳಿ ನಾರಾಣಪ್ಪ, ನಿರ್ದೇಶಕರಾದ ದುರ್ಗಪ್ಪ ಸಿಡಿಯಾಪುರ, ಕೆರಿಯಪ್ಪ ಮಳಲಿ, ಎ.ಜಿ.ಮಂಜುನಾಥ ಸ್ವಾಮಿ ಅಡೂರು, ಎಂ.ಎಸ್.ವೇದಾಂತಪ್ಪ ಬಳ್ಳೀಬೈಲು, ಗುಡ್ಡಪ್ಪ ಜೋಗಿ ಹೊಸೂರು, ರೇಣುಕಮ್ಮ ಹೊಸೂರು, ಜಯಲಕ್ಷ್ಮೀ ನೇರದವಳ್ಳಿ, ಕಾನುಕೇವಿ ಮಂಜಪ್ಪ ಐಗಿನಬೈಲು, ಘಂಟಿನಕೊಪ್ಪ ಮೇಘರಾಜ್, ಕ್ಷೇತ್ರಾಧಿಕಾರಿ ಮಾಲತೇಶ್ ಇದ್ದರು. ಕಾರ್ಯನಿರ್ವಹಣಾಧಿಕಾರಿ ಶಿವಾನಂದ ನಿರೂಪಿಸಿದರು. ವೀರೇಂದ್ರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net