

ಹುಬ್ಬಳ್ಳಿ: ಇಲ್ಲಿಯ ನವನಗರ ಕೆಎಚ್ ಬಿ ಕಾಲನಿಯಲ್ಲಿರುವ ಶ್ರೀ ನಂದೀಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಶ್ರಾವಣ ಪ್ರಯುಕ್ತ ತಿಂಗಳ ಕಾಲ ಉಣಕಲ್ಲ ಶ್ರೀ ಸದ್ಗುರು ಸಿದ್ದಪ್ಪಜ್ಜನವರ ಪುರಾಣ ಪ್ರವಚನವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ನಂದೀಶ್ವರ ದೇವಸ್ಥಾನದಲ್ಲಿ ನಿತ್ಯ ಸಂಜೆ 6.30ಕ್ಕೆ ಆಧ್ಯಾತ್ಮ ಜೀವಿ ಶಿದ್ದಲಿಂಗಪ್ಪ ಗರಗ ಅವರು ಪ್ರವಚನ ನೀಡುವರು.
ಶ್ರಾವಣ ಅಂಗವಾಗಿ ನಿತ್ಯ ಬೆಳಗ್ಗೆ 6ಕ್ಕೆ ಆಕಾಶ ಶಾಸ್ತ್ರಿಗಳಿಂದ ನಂದೀಶ್ವರ ಹಾಗೂ ಈಶ್ವರ ದೇವರಿಗೆ ರುದ್ರಾಭಿಷೇಕ ನಡೆಯುತ್ತದೆ. ಆಗಸ್ಟ್ 22ರಂದು ಸಂಜೆ ಪುರಾಣ ಮಂಗಳ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಂತರ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.