

ಬೆಂಗಳೂರು: ಮೈಸೂರು ದಸರಾ ನಾಡಿಗೆ ಪ್ರಸಿದ್ಧಿಯಾಗಿದ್ದರೆ; ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ನಂದಿನಿ ಬಡಾವಣೆಯಲ್ಲಿ ಆಯೋಜಿಸುವ ‘ನಂದಿನಿ ಉತ್ಸವ’ ಬೆಂಗಳೂರಿನಲ್ಲಿ ಪ್ರಸಿದ್ಧವಾಗಿದೆ. ನಂದಿನಿ ಬಡಾವಣೆಯಲ್ಲಿ ಕಳೆದ 21 ವರ್ಷಗಳಿಂದ ನಡೆಸಿಕೊಂಡು ಬಂದಿರುವ ನವರಾತ್ರಿ ನಂದಿನಿ ಉತ್ಸವವು ಅ.4ರಿಂದ 12 ರವರೆಗೆ ಹಮ್ಮಿಕೊಳ್ಳಲಾಗಿದ್ದು, ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ನಂದಿನಿ ಬಡಾವಣೆಯು ನವರಾತ್ರಿ ಸರ್ಕಲ್‌ನಲ್ಲಿರುವ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಗಣಹೋಮದೊಂದಿಗೆ ಉತ್ಸವಕ್ಕೆ ಮಾಜಿ ಸಚಿವ ಹಾಗೂ ಶಾಸಕ ಕೆ. ಗೋಪಾಲಯ್ಯ ಮತ್ತು ಚಿತ್ರನಟಿ ಮೇಘನಾ ಶೆಟ್ಟಿ ಚಾಲನೆ ನೀಡಲಿದ್ದಾರೆ.
ಪ್ರತಿ ವರ್ಷದಂತೆ 9 ದಿನಗಳ ಕಾರ್ಯಕ್ರಮದಲ್ಲಿ ಯುಪ ಪ್ರತಿಭೋತ್ಸವ, ಕುಸ್ತಿ ಪಂದ್ಯಾವಳಿ, ದೇಹದಾಢ್ಯ ಪ್ರದರ್ಶನ, ಸ್ವದೇಶಿ ಮೇಳ, ಸುಗಮ ಸಂಗೀತ, ಭರತನಾಟ್ಯ, ಹರಿಕತೆ, ಯಕ್ಷಗಾನ, ಕಾಮಿಡಿ ಶೋ, ಫ್ಯಾಶನ್ ಶೋ. ದಾಂಡಿಯಾ ನೃತ್ಯ, ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಆಯೋಜಕ ಕೆ.ವಿ.ರಾಜೇಂದ್ರಕುಮಾರ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಮಾಜಿ ಸಚಿವರಾದ ಆರ್.ಅಶೋಕ್, ಡಾ. ಅಶ್ವಥ್ ನಾರಾಯಣ್, ಮುಖಂಡರಾದ ಮುನಿರಾಜ್, ನರೇಂದ್ರ ಬಾಬು, ಎಸ್. ಹರೀಶ್ ವಿವಿಧ ನಟ-ನಟಿಯರು ಭಾಗವಹಿಸಲಿದ್ದಾರೆ.