

ಶಿರಾ : ನಮ್ಮ ಕರ್ನಾಟಕದ ನಂದಿನಿ ಹಾಲಿನ ಉತ್ಪನ್ನಗಳು ಉನ್ನತ ದರ್ಜೆಯಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಕರ್ನಾಟಕದಲ್ಲಿ ಒಟ್ಟು 500 ನಂದಿನಿ ಪಾರ್ಲರ್ಗಳನ್ನು ವರ್ಚುಯಲ್ ಮೀಟಿಂಗ್ ಮೂಲಕ ಉದ್ಘಾಟಿಸುತ್ತಿದ್ದಾರೆ. ಅದರಲ್ಲಿ ಶಿರಾ ಕೂಡ ಒಂದು ಎಂದು ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.
ನಂದಿನಿ ಕ್ಷೀರ ಮಳಿಗೆಯನ್ನು ಲೋಕಾರ್ಪಣೆ ಗೊಳಿಸಿದ ನಂತರ ಶಿರಾ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾನು ಪಶು ಸಂಗೋಪನೆ ಇಲಾಖೆಯ ಸಚಿವನಾಗಿದ್ದಾಗ ರಾಜ್ಯದ್ಯಂತ ಕ್ಷೀರಕ್ರಾಂತಿಗೆ ಉತ್ತೇಜನ ನೀಡಿದ್ದೆ ಎಂದು ತಿಳಿಸಿದರು.
ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ, ನಂದಿನಿ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿದ್ದು, ಗುಣಮಟ್ಟದಿಂದ ಕೂಡಿದೆ. ಗುಜರಾತಿನ ಅಮುಲ್ ಹಾಲಿನ ಉತ್ಪನ್ನಗಳನ್ನೇ ಮೀರಿಸುವ ಮಟ್ಟದಲ್ಲಿ ಬೆಳವಣಿಗೆ ಹಾದಿಯಲ್ಲಿದೆ. ರೈತರಿಗೋಸ್ಕರವೇ ತೆರೆದ ಈ ನಂದಿನಿ ಹಾಲು ಒಕ್ಕೂಟ ಬೃಹತ್ ಸಂಸ್ಥೆಯಾಗಿ ಬೆಳೆದು ರೈತರ ಆರ್ಥಿಕ ಸಬಲತೆಗೆ ಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸ್ತುತಿ ತಜ್ಞ ಡಾ.ಡಿ.ಎಂ.ಗೌಡ, ಸಾರ್ವಜನಿಕ ಆಸ್ಪತ್ರೆಯ ಡಾ.ಶ್ರೀನಾಥ್, ಡಾ.ಬಾಬು ರಾಜೇಂದ್ರ ಪ್ರಸಾದ್, ಗ್ಯಾರೆಂಟಿ ಯೋಜನೆ ತಾಲೂಕು ಅಧ್ಯಕ್ಷ ಗುಳಿಗೆನಹಳ್ಳಿ ನಾಗರಾಜ್ ಇತತರು ಇದ್ದರು.