

ಬೆಂಗಳೂರು: ಕರ್ನಾಟಕಕ್ಕೆ ಕಥಕ್ ನೃತ್ಯ ಕಲೆಯನ್ನು ಪರಿಚಯಿಸಿದ ಡಾ. ಮಾಯರಾವ್ ಅವರಿಂದ ಕಥಕ್ ನೃತ್ಯವನ್ನು ಕಲಿತಿರುವ ನಂದಿನಿ ಮೆಹತಾ ಅವರ ಶಿಷ್ಯೆ ವಿಭಾ ಭಟ್ ಅವರು ಜೂ.7 ರಂದು ರಂಗಮಂಚ ಪ್ರವೇಶ ಮಾಡಲಿದ್ದಾರೆ.
ನಂದಿನಿ ಮೆಹತಾ ಮತ್ತು ಮುರಳಿ ಮೋಹನ್ ಅವರಿಂದ ಕಥಕ್ ವಿದ್ಯೆ ಕಲಿತಿರುವ ವಿಭಾ ಭಟ್ ಅವರು ಜೂ.7 ರಂದು ಸಂಜೆ 6ಕ್ಕೆ ಜೆ.ಪಿ.ನಗರದಲ್ಲಿರುವ ಎಂ.ಎಲ್.ಆರ್ ಸಭಾಂಗಣದಲ್ಲಿ ರಂಗ ಮಂಚ ಪ್ರವೇಶ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಗುರುರಾಜ್ ಕರ್ಜಗಿ ಮತ್ತು ಕಲಾ ಪೋಷಕಿ ಉಷಾ ರಾದಕೃಷ್ಣ ಆಗಮಿಸಲಿದ್ದಾರೆ.