

ಮಂಗಳೂರು: ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಮಾರಾಟ ಮಾಡುವ ಮೊಸರು, ಸಿಹಿ ಲಸ್ಸಿ, ಸಾದಾ ಮಜ್ಜಿಗೆ ಮತ್ತು ಜೀರಾ ಮಜ್ಜಿಗೆಯ ಮಾರಾಟ ದರ ಪರಿಷ್ಕರಿಸಲಾಗಿದೆ.
ಮೊಸರು 200 ಗ್ರಾಂ ಪೊಟ್ಟಣಕ್ಕೆ 12 ರೂ., 415 ಗ್ರಾಂಗೆ 22 ರೂ., 1 ಕೆ.ಜಿ.ಗೆ 47ರೂ., 6 ಕೆ.ಜಿ.ಯ ಜಂಬೊ ಪ್ಯಾಕ್‌ಗೆ 279 ರೂ. ನಿಗದಿಪಡಿಸಲಾಗಿದೆ. ಮಜ್ಜಿಗೆ 200 ಮಿ.ಲೀ.ಗೆ 8 ರೂ., ಸಾದಾ ಮಜ್ಜಿಗೆ 500 ಮಿ.ಲೀ. 20 ರೂ., ಸಿಹಿ ಲಸ್ಸಿ 200 ಮಿ.ಲೀ. 12 ರೂ., ಜೀರಾ ಮಜ್ಜಿಗೆಗೆ 250 ಮಿ.ಲೀ.ಗೆ 10 ರೂ. ದರ ನಿಗದಿ ಮಾಡಲಾಗಿದೆ.
ಒಕ್ಕೂಟದಲ್ಲಿ ಹಳೆಯ ದರಗಳು ಮುದ್ರಿತವಾಗಿರುವ ಪೌಚ್ ಫಿಲಂ ದಾಸ್ತಾನು ಮುಗಿಯುವವರೆಗೆ ಹಳೆಯ ದರಗಳು ಮುದ್ರಿತವಾಗಿರುವ ಪ್ಯಾಕೆಟುಗಳಲ್ಲಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಉತ್ಪನ್ನಗಳನ್ನು ಪ್ಯಾಕ್ ಮಾಡಿ ಸರಬರಾಜು ಮಾಡಲಾಗುವುದು.
ಗ್ರಾಹಕರು ಹಾಗೂ ನಂದಿನಿ ಹಾಲಿನ ಅಧಿಕೃತ ಡೀಲರ್‌ಗಳು ಪರಿಷ್ಕೃತ ದರದಲ್ಲಿಯೇ ವ್ಯವಹರಿಸಿ ಒಕ್ಕೂಟದೊಂದಿಗೆ ಸಹಕರಿಸುವಂತೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.