ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ: ನಂದಿಕೇಶ್ವರ ಶಾಲೆ ವಿದ್ಯಾರ್ಥಿಗಳ ಸಾಧನೆ

Nandikeshwar School Achievement in Bharatnatyam Exam Mandya
Published on

ಮಂಡ್ಯ: ನಗರದ ಬನ್ನೂರು ರಸ್ತೆಯಲ್ಲಿರುವ ಸರ್ವ ಬಣಜಿಗ ಸಂಘ ಭವನದಲ್ಲಿ ಇತ್ತೀಚೆಗೆ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಿಂದ ನಡೆಸಿದ ಶಾಸ್ತ್ರೀಯ ನೃತ್ಯ ವಿಭಾಗದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ನಂದಿಕೇಶ್ವರ ಭರತನಾಟ್ಯ ಕಲಾಶಾಲೆಯ ಮಂಡ್ಯ ಮತ್ತು ಮದ್ದೂರಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಎಚ್.ಕೆ.ಚಿರನ್ವಿ(ಶೇ.95), ಎಚ್.ಕೆ.ಚಿನ್ಮಯಿ(ಶೇ.98.5), ಶ್ರೀದೇವಿ ಎನ್.ರಾವ್(ಶೇ.88.5), ಮೋದಿಕಾ ಡಿ.ಗೌಡ(ಶೇ.83.75), ಶ್ರೀಕೃಷ್ಣ ಎನ್.ರಾವ್(ಶೇ.83), ಆರ್.ನಿಖಿತಾ(ಶೇ.82), ಮನಿಷಾ ಎಸ್.ರಾಜ್(ಶೇ.78.5), ಎಚ್.ಪಿ.ರಕ್ಷಾ(ಶೇ.77.5), ಪಿ.ವಾರಿಣಿ ಆತ್ರೆಯಾಸ್(ಶೇ.71) ಮತ್ತು ಸಂಹಿತಾ ಅಶೋಕ್(ಶೇ.66.25) ಫಲಿತಾಂಶ ಪಡೆದಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಕಲಾಶಾಲೆಯ ನೃತ್ಯ ನಿರ್ದೇಶಕಿ ವಿದುಷಿ ಕೆ.ಎಸ್.ಶೈಲಾ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net