ಸಾವಿನಲ್ಲೂ ಒಂದಾದ ವೃದ್ಧ ದಂಪತಿ

je721538035802367-abc
Published on

ರಾಣೆಬೆನ್ನೂರ: ಸಾವಿನಲ್ಲೂ ವೃದ್ಧ ದಂಪತಿ ಒಂದಾದ ಮನಕುಲಕುವ ಟನೆ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.

ಗ್ರಾಮದ ವೀರಬಸಪ್ಪ ಗೋವಿಂದಪ್ಪ ಗೋಣಗೇರ (70) ಎಂಬುವರು ವಯೋಸಹಜದಿಂದ ಬೆಳಗ್ಗೆ 7.30ಕ್ಕೆ ನಿಧನ ಹೊಂದಿದ್ದರು. ಅವರ ಅಂತ್ಯಸಂಸ್ಕಾರಕ್ಕಾಗಿ ಗ್ರಾಮಸ್ಥರು ಸ್ಮಶಾನಕ್ಕೆ ತೆಗೆದುಕೊಂಡು ಹೋದ ಸಮಯದಲ್ಲಿ ಸಂಜೆ 4.30ಕ್ಕೆ ಆತನ ಮೃತ ದೇಹದ ಮೇಲೆ ಮಲಗಿಕೊಂಡು ಪತ್ನಿ ಬಸಮ್ಮ ವೀರಬಸಪ್ಪ ಗೋಣಗೇರ (64) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇವರು ಕಳೆದ ಕಳೆದ ಐವತ್ತು ವರ್ಷಗಳ ಕಾಲ ಒಂದಾಗಿ ಜೀವನ ಮಾಡಿದ್ದರು. ವೃದ್ಧ ದಂಪತಿ ಒಂದೇ ಸಮಯದಲ್ಲಿ ಮೃತಪಟ್ಟ ಹಿನ್ನೆಲೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಂತರ ಅವರನ್ನು ಜತೆಯಾಗಿ ಅಂತ್ಯಸಂಸ್ಕಾರ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net