ನಂದಿಗಿರಿ ಪ್ರದಕ್ಷಿಣೆ ಹಾಕಿದ ಸಾವಿರಾರು ಭಕ್ತರು

nandigiri rounds
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಆಷಾಢ ಮಾಸದ ಕೊನೆಯ ಸೋಮವಾರ ನಂದಿ ಗಿರಿ ಪ್ರದಕ್ಷಿಣೆ ಸಹಸ್ರಾರು ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನೇರವೇರಿತು. ಭೋಗ ನಂದೀಶ್ವರ ದೇವಾಲಯದಿಂದ ಆರಂಭವಾದ ಗಿರಿ ಪ್ರದಕ್ಷಣೆಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ದೇವರ ನಾಮ ಸ್ಮರಣೆಯೊಂದಿಗೆ ಭಕ್ತರು ಪ್ರಕೃತಿ ರಮ್ಯತಾಣ ನಂದಿ ಪ್ರದಕ್ಷಣೆಯಲ್ಲಿ ಭಾಗವಹಿಸಿದ್ದರು. ನಂದಿ ಬೆಟ್ಟದ ಸುತ್ತಲು ಇರುವ ದಿಬ್ಬಗಿರಿ, ಬ್ರಹ್ಮಗಿರಿ, ಚೆನ್ನಗಿರಿ, ಸ್ಕಂದ ಗಿರಿ ಸೇರಿ ಪಂಚಗಿರಿಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿದರು. ಪ್ರತಿ ವರ್ಷದಂತೆ ಶ್ರೀ ನಂದಿ ಗಿರಿ ಪ್ರದಕ್ಷಣಾ ಸೇವಾ ಟ್ರಸ್ಟ್‌ನಿಂದ ಗಿರಿ ಪ್ರದಕ್ಷಣೆ ಆಯೋಜಿಸಲಾಗಿತ್ತು. ಮಾರ್ಗದ ಹಲವು ಭಾಗಗಳಲ್ಲಿ ಭಕ್ತರಿಗೆ ನೀರು, ಬಿಸ್ಕತ್ತು, ಬಾಳೆಹಣ್ಣು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net