ಬುದ್ಧಿಯ ಮೇಲೆ ಆಹಾರದ ಪರಿಣಾಮ - ಪ್ರವೀಣ್ ಸರಳಾಯ ಹೇಳಿಕೆ - ನಂದಿ ರಥಯಾತ್ರೆ

PTR_23 MAR_2
Published on

ವಿಟ್ಲ: ಮನುಷ್ಯನ ಬುದ್ಧಿಯ ಮೇಲೆ ಆಹಾರಗಳೂ ಪರಿಣಾಮ ಬೀರುತ್ತದೆ. ಭೂಮಿಗೆ ವಿಷವನ್ನು ನೀಡಿ ಸತ್ವ ಇಲ್ಲದ ಆಹಾರವನ್ನು ತಿನ್ನುವ ಪರಿಸ್ಥಿತಿ ಬಂದಿದೆ. ಸಹಕಾರಿ ಸಂಸ್ಥೆಗಳು ಭೂಮಿಗೆ ವಿಷವನ್ನು ನೀಡುವ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿವೆ. ಜಲ ಸಂಪತ್ತು ಉಳಿಯಬೇಕಾದ ಗೋವಿನ ಅಗತ್ಯವಿದೆ. ಜೋಡೆತ್ತು ಇದ್ದರೆ ಮಣ್ಣು, ಮಾನವ ಉಳಿಯಲು ಸಾಧ್ಯ ಎಂದು ಪ್ರಾಂತ ಗೋ ಸೇವಾ ಪ್ರಮುಖ್ ಪ್ರವೀಣ್ ಸರಳಾಯ ಹೇಳಿದರು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗೋ ಸೇವಾ ಗತಿವಿಽ ಕರ್ನಾಟಕ, ರಾಧಾಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಪುದು ಆಶ್ರಯದಲ್ಲಿ ನಡೆಯುತ್ತಿರುವ ನಂದಿ ರಥಯಾತ್ರೆಯ ಆಗಮನ ಹಿನ್ನಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಟ್ಲ ಮೇಗಿನಪೇಟೆಯಲ್ಲಿ ರಥವನ್ನು ಸ್ವಾಗತಿಸಿಕೊಂಡು ಕುಣಿತ ಭಜನೆಯೊಂದಿಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರಕ್ಕೆ ಶೋಭಾಯಾತ್ರೆ ನಡೆಯಿತು. ದೇಗುಲದಲ್ಲಿ ನಂದಿ ಪೂಜೆ, ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಗೋ ಕಥೆ ಸಂಪನ್ನಗೊಂಡಿತು.

ರಾಧಾ ಸುರಭಿ ಗೋ ಮಂದಿರ ಪ್ರಮುಖ್ ಭಕ್ತಿಭೂಷಣ್ ದಾಸ್, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ವಿಟ್ಲ ಭಜನಾ ಪರಿಷತ್ತಿನ ಕೃಷ್ಣಯ್ಯ ಕೆ. ವಿಟ್ಲ, ನಂದಿ ರಥಯಾತ್ರೆ ಸಮಿತಿ ವಿಟ್ಲ ನಗರ ಸಮಿತಿ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಸೇರಾಜೆ, ಉಪಾಧ್ಯಕ್ಷ ಜಯರಾಮ ಬಲ್ಲಾಳ್, ಕೋಶಾಽಕಾರಿ ರಾಧಾಕೃಷ್ಣ ಕೂಡೂರು ಮತ್ತಿತರರು ಉಪಸ್ಥಿತರಿದ್ದರು.

ವಿಟ್ಲ ಅಧ್ಯಕ್ಷ ಮೋಹನ್ ಗೌಡ ಕಾಯರ್‌ಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಜಗದೀಶ ಪಾಣೆಮಜಲು ವಂದಿಸಿದರು. ಗೋವರ್ಧನ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net