ನಂದಿ ರಥಯಾತ್ರೆಗೆ ಮಡಿಕೇರಿಯಲ್ಲಿ ಸ್ವಾಗತ

nandi ratha
Published on

ಮಡಿಕೇರಿ: ಗೋಸೇವಾ ಗತಿವಿಧಿ ಕರ್ನಾಟಕ, ರಾಧಾಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ ದೇಶೀಯ ಗೋವುಗಳ ಉಳಿವು ಮತ್ತು ವಿಷಮುಕ್ತ ಗಾಳಿ, ಮಣ್ಣು, ಆಹಾರ, ಪ್ರಕೃತಿ-ಸಂಸ್ಕೃತಿಯ ರಕ್ಷಣೆಗಾಗಿ ರಾಜ್ಯಾದ್ಯಂತ ನಡೆಸುತ್ತಿರುವ ನಂದಿ ರಥಯಾತ್ರೆ ಮಂಗಳವಾರ ಮಡಿಕೇರಿ ನಗರ ಪ್ರವೇಶ ಪಡೆಯಿತು.

ಗೋವುಗಳ ಉಳಿವು, ಭೂಮಿ ಮತ್ತು ಪರಿಸರದ ರಕ್ಷಣೆಯ ಉದ್ದೇಶದಿಂದ ೮೮ ದಿನಗಳ ಕಾಲ ರಥ ಸಂಚರಿಸಲಿದ್ದು, ಮಂಗಳವಾರ ಮಡಿಕೇರಿಗೆ ಆಗಮಿಸಿದ ನಂದಿ ರಥಕ್ಕೆ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಸ್ವಾಗತ ಕೋರಲಾಯಿತು. ಬಳಿಕ ಶಾಂತಿನಿಕೇತನ ಸಮೀಪ ಗೋವುಗಳಿಗೆ ಭಕ್ತರು ಪೂಜೆ ಸಲ್ಲಿಸಿ ಹಣ್ಣು ಹಂಪಲು ನೀಡಿ ಉಪಚರಿಸಿದರು.

ಈ ವೇಳೆ ಮಾತನಾಡಿದ ಗೋಸೇವಾ ಗತಿವಿಧಿ ಕೊಡಗು ಜಿಲ್ಲಾ ಸಂಯೋಜಕ್ ಪ್ರದೀಪ್ ವಾಲ್ನೂರು, ರಾಜ್ಯದಲ್ಲಿ ೨ನೇ ವರ್ಷದ ನಂದಿ ರಥಯಾತ್ರೆ ನಡೆಸಲಾಗುತ್ತಿದೆ. ದೇಶಿ ಗೋ ತಳಿಯ ರಕ್ಷಣೆ, ಗೋಮಾತೆಯನ್ನು ವಿಶ್ವ ಮಾತೆಯನ್ನಾಗಿ ಘೋಷಿಸಬೇಕು ಮತ್ತು ಭಾರತ ವಿಶ್ವ ಗುರುವಾಗಬೇಕೆಂಬ ಸಂಲಕ್ಪದೊಂದಿಗೆ ಯಾತ್ರೆ ಸಾಗಿದೆ. ಎಲ್ಲಾ ಕಡೆಗಳಲ್ಲೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.

ಈ ಸಂದರ್ಭ ವಿರಾಜಪೇಟೆ ಗೋ ಸೇವಾ ಸಂಯೋಜಕ ಸೋಮಶೇಖರ್, ಆರ್‌ಎಸ್‌ಎಸ್ ಕಾರ್ಯಕರ್ತ ದಿನೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net