

ಚಳ್ಳಕೆರೆ: ತಾಲೂಕಿನ ಸಿದ್ದಾಪುರದಲ್ಲಿ ಇತ್ತೀಚೆಗೆ ಈಶ್ವರಸ್ವಾಮಿ ಕಾರ್ತಿಕೋತ್ಸವ ಅಂಗವಾಗಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ದೊಡ್ಡ ರಥೋತ್ಸವ ನಡೆಯಿತು. ಗ್ರಾಮದ ಎಲ್ಲ ಸಮುದಾಯಗಳ ಸಮ್ಮುಖದಲ್ಲಿ ತೇರಿಗೆ ಬಲಿ ಅನ್ನ ಸಮರ್ಪಿಸಿ, ಪುರವಂತರ ವೀರನಾಟ್ಯ, ಬಳಿಕ ನಂದಿಕೋಲು ಕುಣಿತದೊಂದಿಗೆ ಈಶ್ವರಸ್ವಾಮಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು.
ಶಾಸಕ ಟಿ.ರಘುಮೂರ್ತಿ, ಗ್ರಾಪಂ ಅಧ್ಯಕ್ಷೆ ಮಂಗಳಮ್ಮ, ಗದ್ದಿಗೆ ತಿಪ್ಪೇಸ್ವಾಮಿ, ಟಿ. ಗಿರಿಯಪ್ಪ, ಗುಡಿಗೌಡ ರವೀಶ್, ಮಂಜುನಾಥ, ಮಹೇಶ್ಗೌಡ, ಕೃಷ್ಣಮೂರ್ತಿ, ಮಂಜುನಾಥ ಯಾದವ್, ಮಹೇಶ್, ಮೈಲಾರಿ ಎಸ್.ಎಂ. ಗಂಗಮ್ಮ, ಮಲ್ಲೇಶ್, ಗೊಂಚಿಗಾರ ನಾಗಭೂಷಣ, ಎಂ. ಯತೀಶ್, ಶಂಕ್ರಮ್ಮ, ವೀರಭದ್ರಪ್ಪ, ಶಿವು ಕಣೆಕಲ್ ಇತರರಿದ್ದರು.
ಬಾವುಟ: ಈ ವರ್ಷದ ಸ್ವಾಮಿಯ ಮುಕ್ತಿ ಬಾವುಟವನ್ನು ಗ್ರಾಮದ ಗೌಡರ ಕರಿಯಣ್ಣ ಅವರ ಮಗ ತಿಪ್ಪೇಸ್ವಾಮಿ, ಮಂಜುನಾಥ ಎಂಬುವರು 80 ಸಾವಿರ ರೂ.ಗೆ ಪಡೆದುಕೊಂಡರು.