ನಂದಿಬಂಡಿ ಬಸವೇಶ್ವರ ರಥೋತ್ಸವ ಅದ್ದೂರಿ

nandi bandi basaveswara jatra koppal
Published on

ಕೊಪ್ಪಳ: ತಾಲೂಕಿನ ಹ್ಯಾಟಿ- ಮುಂಡರಗಿ ಸಮೀಪದ ನಂದಿಬಂಡಿ ಬಸವೇಶ್ವರ ಜಾತ್ರೋತ್ಸವ ಸೋಮವಾರ ಅಪಾರ ಭಕ್ತಗಣದ ನಡುವೆ ಸಂಭ್ರಮದಿಂದ ನೆರವೇರಿತು.

ಬೆಳಗ್ಗೆ ಬಸವೇಶ್ವರನಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಅಲಂಕಾರ ನೆರವೇರಿಸಲಾಯಿತು. ಮೈನಳ್ಳಿ&ಬಿಕನಳ್ಳಿ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಹಾರಥಕ್ಕೆ ಹೋಮ -ಹವನ, ಬಳಿಕ ಮಹಾಪ್ರಸಾದ, ಸಂಜೆ ಪಠ ಸವಾಲು ನೆರವೇರಿದವು.

ಸಂಜೆ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು. ಮೆಳ್ಳಿಕೇರಿ, ಲಾಚನಕೇರಿ, ಗೊಂಡಬಾಳ, ಹ್ಯಾಟಿ, ಮುಂಡರಗಿ ಸೇರಿ ವಿವಿಧ ಗ್ರಾಮದ ಭಜಕ್ತರು ಭಾಗಿಯಾಗಿದ್ದರು. ದೇವರ ದರ್ಶನ ಪಡೆದು ಪುನೀತರಾದರು. ಮಂಗಳವಾರ ಸಂಜೆ ಭಕ್ತ ಹಿತ ಚಿಂತನಾ ಸಭೆ, ಧಾರ್ಮಿಕ ಸಭೆ ರಾತ್ರಿ 8 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net