ನಂದೀಶ್ ಸಾವಿನ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ

11-kgl-1,.
ಕೊಳ್ಳೇಗಾಲ ಪಟ್ಟಣದ ಲಿಂಗಣಾಪುರ ಬಡಾವಣೆಯಲ್ಲಿರುವ ಮೃತ ನಂದೀಶ್ ಮನೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಎನ್.ಮಹೇಶ್ ಭೇಟಿ ನೀಡಿ ಸಾಂತ್ವನ ಹೇಳಿದರು.
Published on

ಕೊಳ್ಳೇಗಾಲ: ನಂದೀಶ್ ಸಾವಿನ ಪ್ರಕರಣ ಕುರಿತು ಸೂಕ್ತ ತನಿಖೆ ಆಗಬೇಕು, ಆತನ ಕುಟುಂಬಸ್ಥರಿಗೆ ನ್ಯಾಯ ಸಿಗಬೇಕು. ಈ ಪ್ರಕರಣದಲ್ಲಿ ಪೊಲೀಸ್ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಎನ್.ಮಹೇಶ್ ಆರೋಪಿಸಿದರು.
ಪಟ್ಟಣದ ಲಿಂಗಣಾಪುರ ಬಡಾವಣೆಯಲ್ಲಿರುವ ನಂದೀಶ್ ಮನೆಗೆ ಗುರುವಾರ ಭೇಟಿ ನೀಡಿ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿದ ಅವರು, ಜ.6ರಂದು ರಾತ್ರಿ ಮೈಸೂರಿನಿಂದ ಕೊಳ್ಳೇಗಾಲದ ಬಸ್ ನಿಲ್ದಾಣಕ್ಕೆ ಬಂದಾಗ ಬಸ್‌ನಲ್ಲಿ ಕೆಲವರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ, ನಂತರ ಏನಾಯಿತು ಎಂಬುದು ನಿಗೂಢವಾಗಿದೆ ಎಂದರು.
ಅಂದು ರಾತ್ರಿ ಪಾಲಕರು ನಂದೀಶ್‌ನನ್ನು ಹುಡುಕಿಕೊಡುವಂತೆ ದೂರು ನೀಡಲು ಹೋದಾಗ ಪೊಲೀಸರು ಅದನ್ನು ಗಭೀರವಾಗಿ ತೆಗೆದುಕೊಂಡಿಲ್ಲ. ಬಸ್ ನಿಲ್ದಾಣದಲ್ಲಿ ಗಲಾಟೆಯಾದ ನಂತರ ಆತ ಕಾಣೆಯಾಗಿರುವುದರಿಂದ ಪೊಲೀಸರು ಗಭೀರವಾಗಿ ತೆಗೆದುಕೊಳ್ಳಬೇಕಿತ್ತು. ಆದರೆ, ಆ ಕೆಲಸವಾಗಿಲ್ಲ. ಪೊಲೀಸ್ ನಿರ್ಲಕ್ಷ್ಯ ಕಾಣುತ್ತಿದೆ. ನಾವು ಆತನನ್ನು ಹುಡುಕುವ ಕೆಲಸ ಮಾಡಿದ್ದೇವೆ ಎಂದು ಪೊಲೀಸರು ಹೇಳುತ್ತಾರೆ. ಆ.7 ರಂದು ಬೆಂಗಳೂರಿನ ರೈಲ್ವೆ ಟ್ರ್ಯಾಕ್‌ನಲ್ಲಿ ನಂದೀಶ್ ಮೃತ ದೇಹ ದೊರೆತಿದೆ. ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದರೆ, ಕೊಳ್ಳೇಗಾಲ ಪೊಲೀಸರು ಸಂತ್ರಸ್ತ ಕುಟುಂಬದವರ ಹೇಳಿಕೆಯನ್ನು ತೆಗೆದುಕೊಂಡಿದ್ದಾರೆ. ಈಗಾಗಲೇ ದಕ್ಷಿಣ ವಲಯ ಡಿಜಿಪಿ ಹಾಗೂ ಅಪರ ಪೊಲೀಸ್ ವರಿಷ್ಠಾಧಿಕಾರಿ ಜತೆ ಮಾತನಾಡಿದ್ದೇನೆ. ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಎಂದು ತಿಳಿಸಿದ್ದೇನೆ ಎಂದರು.
ಪಾಲಕರ ಒತ್ತಾಯ:
ಈ ವೇಳೆ ನಂದೀಶ್ ತಂದೆ ಮಹದೇವಪ್ಪ ಹಾಗೂ ತಾಯಿ ದ್ರಾಕ್ಷಾಯಿಣಿ ಮಗನ ಸಾವಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯ ಮಾಡಿದರು. ಬಡಾವಣೆಯ ಬಸವರಾಜಪ್ಪ ಮಾತನಾಡಿ, ಸೋಮವಾರ ನಂದೀಶ್ ಮೃತ ದೇಹ ಊರಿಗೆ ತರುವಾಗ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಬಳಿ ಪೊಲೀಸರು ಅಡ್ಡಗಟ್ಟಿ ಅಗೌರವ ತೋರಿಸಿದ್ದಾರೆ. ಅಲ್ಲದೆ ಬಡಾವಣೆಯ ನಿವಾಸಿ ಕಿರಣ್ ಎಂಬುವವರನ್ನು ಪಟ್ಟಣದ ಪಿಎಸ್‌ಐ ಮಹೇಶ್‌ಕುಮಾರ್ ಠಾಣೆಗೆ ಕರೆಯಿಸಿ ರೌಡಿಶೀಟರ್ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ ಎಂದು ದೂರಿದರು.
ಮುಖಂಡ ನಗರಸಭಾ ಸದಸ್ಯ ರಾಮಕೃಷ್ಣ, ಚಿಂತು ಪರಮೇಶ್ವರಯ್ಯ, ಜಗದೀಶ್ ಶಂಕನಪುರ, ಎಸ್.ಸಿದ್ದಪ್ಪಾಜಿ, ಆಗಸ್ಟೀನ್, ಕೆ.ಕೆ ಮೂರ್ತಿ, ಜಾಕಿ ಸುರೇಶ್, ವಕೀಲ ರಾಜೇ ಂದ್ರ, ಸೋಮಣ್ಣ ಉಪ್ಪಾರ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net