ನಂದಾವರ ದೇವಳದಲ್ಲಿ ಸಾಮೂಹಿಕ ಪಿಂಡ ಪ್ರದಾನ

New Project (22)
Published on

ಬಂಟ್ವಾಳ: ಮಹಾಲಯ ಅಮಾವಾಸ್ಯೆ ಪ್ರಯುಕ್ತ ಭಾನುವಾರ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ದೇವಸ್ಥಾನದಲ್ಲಿ ಪಿತೃಗಳಿಗೆ ಸಾಮೂಹಿಕ ಪಿಂಡ ಪ್ರದಾನ ಕಾರ್ಯಕ್ರಮ ನಡೆಯಿತು.

ದೇವಸ್ಥಾನ ಪ್ರಧಾನ ಅರ್ಚಕ ಮಹೇಶ್ ಭಟ್ ಪೌರೋಹಿತ್ಯದಲ್ಲಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತರು ಪಿತೃಗಳಿಗೆ ಪಿಂಡ ತರ್ಪಣ ನೀಡಿದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕಾಂತಾಡಿಗುತ್ತು, ಸದಸ್ಯರಾದ ದೇವಿಪ್ರಸಾದ್ ಪೂಂಜ, ಕೆ.ಮೋಹನದಾಸ್ ಪೂಜಾರಿ ಬೊಳ್ಳಾಯಿ, ಅಣ್ಣು ನಾಯ್ಕ ನಗ್ರಿ, ನವೀನ್ ಕುಮಾರ್ ಪಣೋಲಿಬೈಲು, ಸುಧೀರ್ ನಾಯಕ್ ಕೆ.ಕಾನ್ಸಲೆ, ಸುಜಾತಾ ಗಣೇಶ್ ಶೆಟ್ಟಿ, ಬೇಬಿ ಯೋಗೀಶ್ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net