ನಂದನಹಿತ್ಲು ದೈವಸ್ಥಾನದಲ್ಲಿ ನೇಮೋತ್ಸವ

New Project (2)
Published on

ಬಂಟ್ವಾಳ: ಬಂಟ್ವಾಳ ಪೇಟೆಯಲ್ಲಿರುವ ನಂದನಹಿತ್ಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದಲ್ಲಿ ಏ.1ರಿಂದ 3 ರವರೆಗೆ ಕಾಲಾವಧಿ ನೇಮೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಸೋಮವಾರ ದೈವಕ್ಷೇತ್ರದಲ್ಲಿ ಕೋಳಿಗುಂಟ ಸಾಂಪ್ರದಾಯಿಕವಾಗಿ ನೆರವೇರಿತು.

ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಕೋಳಿಗುಂಟ ನೆರವೇರಿಸಿದರು. ಪೊಣ್ಣಂಗಿಲ ಗುತ್ತುವಿನ ವಿಶ್ವನಾಥ ಪೂಜಾರಿ, ಬಾಳಿಗ ಮನೆತನದ ಸುಧೀರ್ ಬಾಳಿಗ, ಗಾಣದಪಡ್ಪು ಮನೆತನದ ಲೋಕೇಶ್ ಬಂಗೇರ, ಸಂಜೀವ ಪೂಜಾರಿ ಪೆಲತ್ತಿಮಾರ್, ಬಡಕೊಟ್ಟು ಮನೆತನದ ಲೋಕನಾಥ ಪೂಜಾರಿ, ಪ್ರಮುಖರಾದ ಬಾಬು ಶೆಟ್ಟಿ ತುಂಬೆ, ಶ್ರೀಧರ ಪೂಜಾರಿ, ದೇವದಾಸ್ ಅಮೀನ್, ಜಗನ್ನಾಥ ಬಂಟ್ವಾಳ, ಜಯಸುವರ್ಣ, ಶಿವಪ್ರಸಾದ್ ಬಂಟ್ವಾಳ ಮತ್ತಿತರರು ಭಾಗವಹಿಸಿದ್ದರು.

1ರಂದು ಬೆಳಗ್ಗೆ ಗಣಹೋಮ, ನಾಗತಂಬಿಲ, ನವಕ ಕಲಶಾಭಿಷೇಕ, ಅನ್ನಸಂತರ್ಪಣೆ, ರಾತ್ರಿ 9 ಗಂಟೆಗೆ ಭಂಡಾರ ಆಗಮಿಸಿ,ಧ್ವಜಾರೋಹಣ ನಡೆದು ಶ್ರೀ ಅರಸು ದೈವದ ನೇಮೋತ್ಸವ, 2ರಂದು ರಾತ್ರಿ 9 ಗಂಟೆಗೆ ಶ್ರೀ ಜುಮಾದಿ ಬಂಟ ದೈವಗಳ ನೇಮೋತ್ಸವ, 3ರಂದು ರಾತ್ರಿ 10 ಗಂಟೆಗೆ ಶ್ರೀ ವೈದ್ಯನಾಥ ದೈವದ ನೇಮೋತ್ಸವ, ಕಂಚಿಲ ಸೇವೆ ಹಾಗೂ ಶ್ರೀ ವೈದ್ಯನಾಥ ದೈವದ ಪೇಟೆ ಸವಾರಿ, ಬಂಡಿ ಉತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net