ನಂದಳಿಕೆ ಬಾಲಚಂದ್ರ ರಾವ್ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಸಾಹಿತಿ ನಂದಳಿಕೆ ಬಾಲಚಂದ್ರ ರಾವ್ ಅವರ ಮೊದಲ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಗುರುವಾರ ಮಂಗಳೂರು ಆರ್.ಎಂ.ಎಸ್. ವಿಭಾಗೀಯ ಕಚೇರಿಯಲ್ಲಿ ಜರುಗಿತು.
ಸಾಹಿತಿ ನಂದಳಿಕೆ ಬಾಲಚಂದ್ರ ರಾವ್ ಅವರ ಮೊದಲ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಗುರುವಾರ ಮಂಗಳೂರು ಆರ್.ಎಂ.ಎಸ್. ವಿಭಾಗೀಯ ಕಚೇರಿಯಲ್ಲಿ ಜರುಗಿತು.
Published on
ಮಂಗಳೂರು: ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದಡಿಯಲ್ಲಿ ಸಾಹಿತಿ ನಂದಳಿಕೆ ಬಾಲಚಂದ್ರ ರಾವ್ ಅವರ ಮೊದಲ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಗುರುವಾರ ಮಂಗಳೂರು ಆರ್.ಎಂ.ಎಸ್. ವಿಭಾಗೀಯ ಕಚೇರಿಯಲ್ಲಿ ಜರುಗಿತು.
ದಿವಂಗತರು ಸಾಧಿಸಿದ ವಿವಿಧ ಸಾಮಾಜಿಕ ಅಭಿವೃದ್ಧಿ ಹಾಗೂ ಕನ್ನಡ ಸಾಹಿತ್ಯ ಕಣ್ಮಣಿ ಕವಿ ಮುದ್ದಣನ ನೆನಪಲ್ಲಿ ಮಾಡಿದ ಸಾರಸ್ವತ ಸೇವೆಯ ನೆನಪಿನಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಅವರ ಪತ್ನಿ ಎನ್. ವಿಜಯಲಕ್ಷ್ಮಿ.ಬಿ.ರಾವ್ ಅವರ ಪ್ರಾಯೋಜಕತ್ವದಲ್ಲಿ ಪುತ್ತೂರು ಅಂಚೆ ವಿಭಾಗದ ಸಹಯೋಗದೊಂದಿಗೆ ಬಿಡುಗಡೆಗೊಳಿಸಲಾಯಿತು.
ಹಿರಿಯ ಸಾಹಿತಿ, ಸಂಶೋಧಕ ಪ್ರೊ.ಬಿ.ಎ.ವಿವೇಕ ರೈ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯಕ್ಷಗಾನ ವಿಧ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಮಂಗಳೂರು ಆರ್.ಎಂ.ಎಸ್ (ಕ್ಯೂ) ವಿಭಾಗದ ಸಹಾಯಕ ಅಧೀಕ್ಷಕ ಮೆಲ್ವಿನ್ ಅರುಣ್ ಲೋಬೋ, ಪುತ್ತೂರು ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕ ಚಂದ್ರ ನಾಯ್ಕ ಎಂ. ಅತಿಥಿಗಳಾಗಿದ್ದರು.
ದಿವಂಗತರ ಪುತ್ರಿ ಸೌಜನ್ಯ ರಾವ್ ನಂದಳಿಕೆ ಸ್ವಾಗತಿಸಿದರು. ಎನ್.ವಿಜಯಲಕ್ಷ್ಮಿ.ಬಿ.ರಾವ್ ವಂದಿಸಿದರು. ಪುತ್ತೂರು ಅಂಚೆ ವಿಭಾಗ ಕಾರ್ಯಾಲಯ ಸಹಾಯಕ ಉದಯೇಶ್ ಕೆದಿಲಾಯ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net