

ವಿಜಯವಾಣಿ ಸುದ್ದಿಜಾಲ ನಂದಗುಡಿ
ಸ್ಥಳ ಮಹಜರು ಮಾಡದೇ ಪ್ರಕರಣದಲ್ಲಿ ಭಾಗಿಯಾಗದೇ ಇರುವವರ ಮೇಲೂ ಸುಳ್ಳು ಕೇಸ್ ದಾಖಲಿಸಿ ಪೊಲೀಸರು ಕರ್ತವ್ಯಲೋಪ ಎಸುತ್ತಿದ್ದಾರೆ ಎಂದು ಆರೋಪಿಸಿ ಶನಿವಾರ ನಂದಗುಡಿ ಠಾಣೆ ಎದುರು ಮುದ್ದನಹಳ್ಳಿಯ ಕೆಲವು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಮುದ್ದನಹಳ್ಳಿ ಗ್ರಾಮದಲ್ಲಿ ಮಣ್ಣು ತುಂಬುವ ವಿಚಾರಕ್ಕೆ ನಡೆದ ಪ್ರಕರಣ ಠಾಣೆ ಮೆಟ್ಟಿಲೇರಿದ್ದು ಗ್ರಾಪಂ ಸದಸ್ಯ ಮುನೇಗೌಡ ಸೇರಿ 9 ಜನರ ವಿರುದ್ಧ ಎ್ಐಆರ್ ದಾಖಲಾಗಿರುವುದು ಗ್ರಾಮದ ಕೆಲವರ ಅಸಹನೆಗೆ ಕಾರಣವಾಗಿದೆ.
ವಿನಾಕಾರಣ ಪ್ರಕರಣ ದಾಖಲು: ಮುದ್ದನಹಳ್ಳಿ ಗ್ರಾಮದ ಷಣ್ಮುಗಂ ಎಂಬುವವರು ಮನೆ ನಿರ್ಮಾಣಕ್ಕಾಗಿ ಖಾಸಗಿ ಸ್ಥಳದಲ್ಲಿ ಮಣ್ಣು ತುಂಬಿದ್ದರು. ಈ ವೇಳೆ ಗಿಡ್ಡನಹಳ್ಳಿ ಗ್ರಾಮದ ಹರೀಶ್ ಎಂಬುವರು ಆಕ್ಷೇಪ ವ್ಯಕ್ತಪಡಿಸಿ ಸರ್ಕಾರಿ ಜಾಗದಲ್ಲಿ ಮಣ್ಣು ತುಂಬಿರುವುದಾಗಿ ಕಾಮಗಾರಿಗೆ ಅಡ್ಡಿಪಡಿಸಿದ್ದರು ಈ ವೇಳೆ ವಾಗ್ದಾದ ನಡೆದು ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈ ಘಟನೆ ನಡೆದ ಮರುದಿನ ಪ್ರಕರಣಕ್ಕೆ ಸಂಬಂಧವಿಲ್ಲದವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಗ್ರಾಪಂ ಸದಸ್ಯನಾಗಿ ಜಗಳ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ಜಗಳ ಬಿಡಿಸುವ ಪ್ರಯತ್ನ ಮಾಡಿದ್ದೆ ಆದರೆ ಸುಖಾಸುಮ್ಮನೆ ನನ್ನ ಮೇಲೆ ದೂರು ನೀಡಲಾಗಿದೆ. ಇದನ್ನು ಪರಿಶೀಲಿಸದೆ ಪೊಲೀಸರು ಎ್ಐಆರ್ ದಾಖಲಿಸಿದ್ದಾರೆ ಎಂದು ಗ್ರಾಪಂ ಸದಸ್ಯ ಮುನೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕುಟುಂಬದವರೊಂದಿಗೆ ಧರ್ಮಸ್ಥಳಕ್ಕೆ ತೆರಳಿದ್ದೆ ಆಗ ಗ್ರಾಮದವರು ಕರೆ ಮಾಡಿ ಎ್ಐಆರ್ ದಾಖಲಿಸಿರುವ ವಿಷಯ ತಿಳಿಸಿದರು. ಘಟನೆ ವೇಳೆ ನಾನು ಧರ್ಮಸ್ಥಳದಲ್ಲಿದ್ದರೂ ನನ್ನ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರ ಕ್ರಮ ಅಕ್ಷಮ್ಯ ಎಂದು ಗಿಡ್ಡನಹಳ್ಳಿಯ ಮುನಿರಾಜು ಅಸಮಾಧಾನ ವ್ಯಕ್ತಪಡಿಸಿದರು.
ನೊಂದವರಿಗೆ ನ್ಯಾಯ: ಹರೀಶ್ ಎಂಬುವರು ದೂರು ಕೊಟ್ಟ ಹಿನ್ನೆಲೆಯಲ್ಲಿ 9 ಜನರ ಮೇಲೆ ಪ್ರಕರಣದ ದಾಖಲಿಸಿದ್ದು ಇದರ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ಪರಿಶೀಲಿಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ನಂದಗುಡಿ ಠಾಣೆಯ ಸಿಪಿಐ ದಿವಾಕರ್ ಪರಿಸ್ಥಿತಿ ತಿಳಿಗೊಳಿಸಿದರು.