ಕಣ್ಣಿನ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಿ

health camp
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ಜಗತ್ತನ್ನು ನೋಡಲು ಕಣ್ಣು ಅತ್ಯವಶ್ಯಕವಾಗಿದ್ದು, ಮಾನವನ ದೇಹದ ಅತೀ ಸೂಕ್ಷ್ಮ ಅಂಗವಾಗಿದೆ. ದೇಹದ ರಕ್ಷಣೆ ಜತೆಗೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಡಾ.ವೀಣಾ ಹೇಳಿದರು.
ಹೋಬಳಿಯ ಮುಗಬಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಹಾಗೂ ಹೊಸಕೋಟೆಯ ಜಿಇಎಫ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಕಣ್ಣಿನ ಪೊರೆ ರೋಗ, ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಕಣ್ಣಿನ ಉಚಿತ ತಪಾಸಣೆ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗಿದ್ದು, ಜನರು ಸದುಪಯೋಗ ಪಡೆಯಬೇಕು ಎಂದರು. 30ಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಪಟ್ಟರು. 15ಮಂದಿಗೆ ಕಣ್ಣಿನ ಪೂರೆ ಶಸ್ತ್ರಚಿಕಿತ್ಸೆ ಮಾಡಲಾಯಿತು.
ಶ್ರುಶೂಕಿ ಸುನಿತಾ ಹಾಗೂ ಆಶಾ ಕಾಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net